

ಸಿಂದಗಿ: ನಗರದ ಹೊರವಲಯದ ಜೇವರಗಿ ರಸ್ತೆಯಲ್ಲಿನ ತೋಟದಲ್ಲಿ ನಕಲಿ ಮದ್ಯ ತಯಾರಿಕೆ ಘಟಕದ ಮೇಲೆ ಶನಿವಾರ ಅಬಕಾರಿ ಪೊಲೀಸರು ದಾಳಿ ನಡೆಸಿ ಆರು ಜನರನ್ನು ಬಂಧಿಸಿದ್ದಾರೆ.
ಇಲ್ಲಿನ ಅಮೋಘಸಿದ್ಧ ಬಸಪ್ಪ ಹೂಗಾರ ಅವರಿಗೆ ಸೇರಿದ ಜಮೀನಿನ ಶೆಡ್‌ನಲ್ಲಿದ್ದ ನಕಲಿ ಘಟಕದ ಮೇಲೆ ದಾಳಿ ನಡೆಸಿ 8.42 ಲಕ್ಷ ರೂ. ಮೌಲ್ಯದ 562ಲೀ. ಮದ್ಯ ಹಾಗೂ 200ಲೀ. ಮದ್ಯಸಾರದ ಜತೆಗೆ ಎಂ.ಸಿ.ಮೆಕಡಾಲ್ ಮತ್ತು ಐಬಿ ಕಂಪನಿ ಹೆಸರಲ್ಲಿ ನಕಲಿ ಬಾಟಲ್ ಮೇಲೆ ಲೇಬಲ್‌ಗಳನ್ನು ಹಚ್ಚಿ ತಯಾರಿಸಿದ್ದ 65 ಮದ್ಯದ ಬಾಕ್ಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ.
ಪಟ್ಟಣದ ಅಮೋಘಸಿದ್ದ ಹೂಗಾರ, ಹುಬ್ಬಳ್ಳಿ ಮೂಲದ ಕೃಷ್ಣಾ ಬಾಂಡಗೆ, ಅಕ್ಷಯ ಜಾಧವ, ಅಭಿಷೇಕ ಜಾಧವ, ನಾಗರಾಜ ಭೋಜಗೇರಿ ಮತ್ತು ವಿನಾಯಕ ಕಲಾಲ ಎಂಬುವವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.
ಬೆಳಗಾವಿಯ (ಅಪರಾಧ) ಕೇಂದ್ರಸ್ಥಾನದ ಅಬಕಾರಿ ಅಪರ ಆಯುಕ್ತರು, ಜಂಟಿ ಆಯುಕ್ತರು, ಅಬಕಾರಿ ಉಪ ಆಯುಕ್ತ ವೀರಣ್ಣ ಬಾಗೇವಾಡಿ, ಸಿಪಿಐ ಮಹಾದೇವ ಪೂಜಾರಿ ಅವರ ಮಾರ್ಗದರ್ಶನದಲ್ಲಿ, ಸಿಂದಗಿ ಅಬಕಾರಿ ನಿರೀಕ್ಷಕ ಶಿವಾನಂದ ಹೂಗಾರ, ರಾಹುಲ್ ನಾಯಕ, ಎಂ.ಡಿ.ಕಬಾಡೆ ಹಾಗೂ ಅಬಕಾರಿ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.