

ಬೈಲಹೊಂಗಲ: ನಕಲಿ ಪತ್ರಕರ್ತರ ಹಾವಳಿ ತಡೆಗಟ್ಟಿ, ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವಿಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂದ ಜಿಲ್ಲಾ ಮತ್ತು ತಾಲೂಕು ಟಕ ವತಿಯಿಂದ ಪಟ್ಟಣದಲ್ಲಿ ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪುರ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ತಾಲೂಕಿನ ಎಲ್ಲ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಅರ ದಾಸೋಹ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಆದರೆ, ಹಲವು ತಿಂಗಳಿನಿಂದ ಪತ್ರಕರ್ತರೆಂದು ಹೇಳಿಕೊಂಡು ಕೆಲ ನಕಲಿ ಪತ್ರಕರ್ತರು ಶಾಲೆಗಳಿಗೆ ಬಂದು ಮುಖ್ಯಶಿಕರು, ಸಹ ಶಿಕರು ಹಾಗೂ ಅಡುಗೆ ಸಿಬ್ಬಂದಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಅನಗತ್ಯವಾಗಿ ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ದೂರಿದರು.
ಅಡುಗೆ ಕೇಂದ್ರದ ೊಟೋ, ವಿಡಿಯೋ ಚಿತ್ರೀಕರಣ ಮಾಡುವ ಮೂಲಕ ಮುಖ್ಯಶಿಕರಿಗೆ ಹಣದ ಬೇಡಿಕೆ ಇಡುತ್ತಿದ್ದಾರೆ. ಹೀಗಾಗಿ, ನಿವೃತ್ತಿ ಸನಿಹದಲ್ಲಿರುವ ಹಿರಿಯ ಶಿಕರು ಆತಂಕದಲ್ಲಿ ಕರ್ತವ್ಯ ನಿರ್ವಹಿಸುವಂತಾಗಿದೆ. ಹೀಗಾಗಿ, ಕೂಡಲೇ ನಕಲಿ ಪತ್ರಕರ್ತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಡಿವೈಎಸ್ಪಿ, ತಹಸೀಲ್ದಾರ್, ತಾಪಂ ಇಒ ಹಾಗೂ ಬಿಇಒ ಅವರಿಗೆ ಮನವಿ ಸಲ್ಲಿಸಲಾಯಿತು. ಸಂದ ಜಿಲ್ಲಾ ಟಕದ ಗೌರವಾಧ್ಯ ಬಿ.ಎಸ್.ಅಂಕಲಗಿ, ಅಧ್ಯ ಬಿ.ಎಸ್.ಕ್ಕೀರಸ್ವಾಮಿಮಠ, ಪ್ರಧಾನ ಕಾರ್ಯದರ್ಶಿ ಎಂ.ಬಿ.ಗಾಣಗಿ, ತಾಲೂಕು ಗೌರವಾಧ್ಯ ಪ್ರಕಾಶ ದೇಶನೂರ, ತಾಲೂಕಾಧ್ಯ ಎಂ.ಆರ್.ಭೋವಿ, ಶಂಕರ ಅರಳಿಕಟ್ಟಿ, ಮುಖ್ಯಶಿಕರಾದ ಜಿ.ಎಂ.ಬೋಳನ್ನವರ, ಬಿ.ಎಸ್.ಚಿವಟಗುಂಡಿ, ಕೆ.ಜಿ.ಭಜಂತ್ರಿ, ಜಿ.ಪಿ.ಚನ್ನಣ್ಣವರ ಇತರರಿದ್ದರು.