ಶಿಕ್ಷಕರ ಸ್ಥಳ ನಿಯುಕ್ತಿಗೆ ಕೌನ್ಸಲಿಂಗ್: ಮೂವರು ರಿಸರ್ವ್

4 HPT 4 (2)
Published on

ಕಾನೂನು ತೊಡಕಿನಿಂದ ಮೂವರಿಗೆ ಸಿಗದ ಸ್ಥಾನ

ಹೊಸಪೇಟೆ: ವಿಜಯನಗರ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯಲ್ಲಿ ಖಾಲಿ ಇರುವ ೪೧೫ ಎಜಿಟಿ ಶಿಕ್ಷಕರ ಹುದ್ದೆಗಳಿಗೆ ನೇಮಕಗೊಂಡಿರುವ ಪೈಕಿ ಮೂವರಿಗೆ ಸ್ಥಳ ನಿಯೋಜನೆ ಮಾಡದೇ, ಕಾಯ್ದಿರಿಸಲಾಗಿದೆ.
ನಗರದ ಡಿಡಿಪಿಐ ಕಚೇರಿಯಲ್ಲಿ ಹೊಸದಾಗಿ ನೇಮಕಗೊಂಡ ಎಜಿಟಿ ಶಿಕ್ಷಕರಿಗೆ ಶಾಲೆಗಳ ಆಯ್ಕೆಗಾಗಿ ಕೌನ್ಸಲಿಂಗ್ ನಡೆಸಲಾಯಿತು.
ನಿಗದಿಯಂತೆ ಬೆಳಗ್ಗೆ ೧೦ ಗಂಟೆಗೆ ಕೌನ್ಸಲಿಂಗ್ ಆರಂಭಗೊAಡಿದ್ದು, ರಾತ್ರಿ ೮.೩೦ಕ್ಕೆ ಪೂರ್ಣಗೊಂಡಿತು. ಗಣಿತ ೧೨೦, ಸಮಾಜ ವಿಜ್ಞಾನ ೧೯೧, ಜೀವಶಾಸ್ತç ೩೬, ಇಂಗ್ಲಿಷ್ ೬೮ ಜನ ಅಭ್ಯರ್ಥಿಗಳು
ನೇಮಕಗೊಂಡಿದ್ದಾರೆ.
ಶಿಕ್ಷಕರ ನೇಮಕಾತಿಗೆ ಸಂಬಂಧಿಸಿ ಕಾನೂನು ಸಂಘರ್ಷ ಎದುರಿಸುತ್ತಿರುವ ಮೂವರು ಅಭ್ಯರ್ಥಿಗಳಿಗೆ ಸ್ಥಳ ನಿಯೋಜನೆ ಮಾಡದೇ, ಕಾಯ್ದಿರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net