ಸತತ ಪ್ರಯತ್ನದಿಂದ ಯಶಸ್ಸು : ಪ್ರೇರಣಾ ಸಭೆಯಲ್ಲಿ ಶಿಕ್ಷಕ ಮುನಿರಾಜ ಅಭಿಮತ

prerana sabhe
ಬೆಳ್ಮಣ್ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಸಮಾಲೋಚನೆ ಮತ್ತು ಪ್ರೇರಣಾ ಸಭೆಯಲ್ಲಿ ನಿವೃತ್ತ ಶಿಕ್ಷಕ ಮುನಿರಾಜ ರೆಂಜಾಳ ಮಾತನಾಡಿದರು
Published on

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಪ್ರಯತ್ನಗಳಿಲ್ಲದೆ ಜೀವನದಲ್ಲಿ ಯಶಸ್ಸು ದೊರೆಯುವುದಿಲ್ಲ. ವಿದ್ಯಾರ್ಥಿಗಳು ನಿರಂತರ ಓದಿನೆಡೆಗೆ ಗಮನವಿಟ್ಟು ಪ್ರಯತ್ನಿಸಿದರೆ ಅಂದುಕೊಂಡ ಗುರಿ ತಲುಪಬಹುದು. ಶಿಕ್ಷಕರ ಹಾಗೂ ಪಾಲಕರ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಉನ್ನತ ದಾರಿಯಲ್ಲಿ ಸಾಗಬಲ್ಲರು ಎಂದು ನಿವೃತ್ತ ಶಿಕ್ಷಕ, ಹಿರಿಯ ಸಾಹಿತಿ ಮುನಿರಾಜ ರೆಂಜಾಳ ಹೇಳಿದರು.

ಬೆಳ್ಮಣ್ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಶಿಕ್ಷಕ, ಪಾಲಕರು ಹಾಗೂ ವಿದ್ಯಾರ್ಥಿಗಳ ಸಮಾಲೋಚನೆ ಮತ್ತು ಪ್ರೇರಣಾ ಸಭೆಯಲ್ಲಿ ಮಾತನಾಡಿದರು. ಶಿಕ್ಷಣತಜ್ಞ ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯ ತುಕಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಸಮಿತಿ ಅಧ್ಯಕ್ಷ ಸೂರ್ಯಕಾಂತ್ ಶೆಟ್ಟಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಆಶಾ ದೇವೇಂದ್ರ ಶೆಟ್ಟಿ, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಗೋಪಾಲ್, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯ ಮೋಹನದಾಸ್ ಶೆಟ್ಟಿ, ಅಲ್ವಿನ್ ನೇರಿ ಪಿಂಟೊ, ಪೂರ್ವಾಧ್ಯಕ್ಷ ಸತೀಶ್ ಮಾಡ ಹಾಗೂ ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಸರ್ವಜ್ಞ ತಂತ್ರಿ ಉಪಸ್ಥಿತರಿದ್ದರು. ಪ್ರಾಂಶುಪಾಲ ವಸಂತ್ ಆಚಾರ್ ಪ್ರಸ್ತಾವನೆಗೈದರು. ಹಿರಿಯ ಉಪನ್ಯಾಸಕಿ ಕಿಶೋರಿ ಬಿ. ಸ್ವಾಗತಿಸಿದರು. ಶುಭವತಿ ವಂದಿಸಿದರು. ಶುಭಗೀತಾ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net