

ಹಟ್ಟಿಚಿನ್ನದಗಣಿ: ಪಟ್ಟಣದ ಹಾಗೂ ಸುತ್ತಲಿನ ಹಳ್ಳಿಗಳಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆ, ಅನ್ನದಾತರಲ್ಲಿ ಆಶಾಭಾವ ಹೆಚ್ಚಿಸಿದೆ.
ಮುಂಗಾರಿಗೆ ತೊಗರಿ ಸೇರಿ ಹಲವು ಬೆಳೆಗಳನ್ನು ಬಿತ್ತಿದ ನಂತರ ಮಳೆಯಿಲ್ಲದೆ ಬೆಳೆಗಳು ಸಂಪೂರ್ಣ ಬಾಡಲಾರಂಭಿಸಿದ್ದರಿಂದ ರೈತ ಬರಗಾಲಕ್ಕೆ ಸಿಲುಕುವ ಭೀತಿ ಉಂಟಾಗಿತ್ತು.
ಕಳೆದ 3 ದಿನಗಳಿಂದ ಜಿಟಿ-ಜಿಟಿ ಮಳೆ ಸುರಿದಿದೆ. ಸೋಮವಾರ ಅಹೋರಾತ್ರಿ ಎಡಬಿಡದೆ ಸುರಿದ ಮಳೆಯಿಂದ ಭೂಮಿ ತಂಪಾಗಿದ್ದು, ಉತ್ತಮ ಬೆಳೆ ಬರುವ ನಿರೀಕ್ಷೆ ರೈತರಲ್ಲಿದೆ.