

ಹಟ್ಟಿಚಿನ್ನದಗಣಿ: ಭಾರತೀಯ ಪರಂಪರೆಯಲ್ಲಿ ವಿವಾಹಕ್ಕೆ ತನ್ನದೆ ಮೌಲ್ಯ ಇದೆ ಎಂದು ಗಜದಂಡ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಮೀಪದ ಚಿಕ್ಕನಗನೂರು ಗ್ರಾಮದ ಶಿವಲಿಂಗೇಶ್ವರ ಜಾತ್ರೋತ್ಸವದ ಅಂಗವಾಗಿ ಬುಧವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಮಹತ್ತರ ಘಟ್ಟವಾಗಿದೆ. ಮದುವೆಗೆ ಅನಗತ್ಯ ಹಣ ವ್ಯರ್ಥ ಮಾಡುವ ಅಗತ್ಯವಿಲ್ಲ. ಸಾಮೂಹಿಕ ವಿವಾಹವೇ ಆದರ್ಶ ಎಂದುಕೊಂಡು ನೂತನ ಜೋಡಿಗಳು ಹೊಂದಾಣಿಕೆಯಿಂದ ಜೀವನ ಸಾಗಿಸಬೇಕು. ಇಂದಿನ ದಿನಗಳಲ್ಲಿ ಪುರಾಣ, ಧರ್ಮಸಭೆ, ಮಹಾಮಂಗಲದ ಬಗ್ಗೆ ಕೆಲವರಿಗೆ ತಿಳಿಯುತ್ತಿಲ್ಲ. ಮೊಬೈಲ್ ಬಂದಾಗಿನಿಂದಲೂ ಜನರು ದೇಗುಲಗಳಿಗೆ ತೆರಳುವುದು ಕಡಿಮೆಯಾಗಿದೆ ಎಂದರು.
ಪ್ರಮುಖರಾದ ಬಸವರಾಜ ಭಜಂತ್ರಿ, ಜ್ಞಾನಮೂರ್ತಿ, ಆನಂದ ಅಂಗಡಿ, ಅಮರೇಶ ತಾತಾ ಹಿರೇಮಠ, ಬಸವರಾಜ ಬರಿಗಾಲ್, ಅರ್ಜುನ್‌ಸಿಂಗ್, ಶಿವಪುತ್ರ ಇತರರಿದ್ದರು.