

ಮಂಗಳೂರು: ಹಾಸನ ಜಂಕ್ಷನ್ ರೈಲು ನಿಲ್ದಾಣ ಯಾರ್ಡ್ ಮೇಲ್ದರ್ಜೆಗೇರಿಸುವ ಕಾಮಗಾರಿ ಹಿನ್ನೆಲೆಯಲ್ಲಿ ಡಿಸೆಂಬರ್ 14 ರಿಂದ 22 ತನಕ ಮಂಗಳೂರು- ಬೆಂಗಳೂರು ಮಾರ್ಗದ ಬಹುತೇಕ ಎಲ್ಲ ರೈಲುಗಳ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯವಾಗಲಿದೆ
ಈ ಅವಧಿಯಲ್ಲಿ ಹಾಸನ ಜಂಕ್ಷನ್ ಯಾರ್ಡ್‌ನಲ್ಲಿ ಸಿಗ್ನಲಿಂಗ್, ಇಂಟರ್‌ಲೋಕ್ ಹಾಗೂ ವಿವಿಧ ಇಂಜಿನಿಯರಿಂಗ್ ವ್ಯವಸ್ಥೆಯನ್ನು ಮರುವಿನ್ಯಾಸಗೊಳಿಸಲು ರೈಲ್ವೆ ಸಚಿವಾಲಯವು ಅನುಮತಿ ನೀಡಿದೆ ಎಂದು ನೈರುತ್ಯ ರೈಲ್ವೆ ಪ್ರಿನ್ಸಿಪಲ್ ಚೀಫ್ ಮ್ಯಾನೇಜರ್ (ಒಪರೇಷನ್) ಅವರು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.
ರೈಲು ಸಂಖ್ಯೆ 16511 ಬೆಂಗಳೂರು- ಮಂಗಳೂರು- ಕಣ್ಣೂರು ಮತ್ತು ರೈಲು ಸಂಖ್ಯೆ 16595 ಬೆಂಗಳೂರು- ಕಾರವಾರ ಪಂಚಗಂಗಾ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಅನ್ನು ಡಿಸೆಂಬರ್ 16 ರಿಂದ ಡಿಸೆಂಬರ್ 20 ತನಕ ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 16512 ಕಣ್ಣೂರು- ಮಂಗಳೂರು- ಬೆಂಗಳೂರು ಮತ್ತು ರೈಲು ಸಂಖ್ಯೆ 16596 ಕಾರವಾರ- ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ಅನ್ನು ಡಿಸೆಂಬರ್ 17 ರಿಂದ ಡಿಸೆಂಬರ್ 21 ತನಕ ರದ್ದುಗೊಳಿಸಲಾಗಿದೆ.
ವಾರದಲ್ಲಿ ಮೂರು ದಿನ ಸಂಚರಿಸುವ ರೈಲು ಸಂಖ್ಯೆ 16575 ಯಶವಂತಪುರ-ಮಂಗಳೂರು ಜಂಕ್ಷನ್ ಗೋಮಟೇಶ್ವರ ಎಕ್ಸ್‌ಪ್ರೆಸ್ ಅನ್ನು ಡಿಸೆಂಬರ್ 14, 17, 19 ಮತ್ತು 21 ರಂದು ರದ್ದುಗೊಳಿಸಲಾಗಿದೆ. ಮಂಗಳೂರು ಜಂಕ್ಷನ್- ಯಶವಂತಪುರ ಗೋಮಟೇಶ್ವರ ಎಕ್ಸ್‌ಪ್ರೆಸ್ 16576 ಅನ್ನು ಡಿಸೆಂಬರ್ 15, 18, 20 ಮತ್ತು 22 ರಂದು ರದ್ದುಗೊಳಿಸಲಾಗಿದೆ. ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ- ಕಾರವಾರ ಎಕ್ಸ್‌ಪ್ರೆಸ್ ನಂಬರ್ 16515 ಪ್ರಯಾಣವನ್ನು ಡಿಸೆಂಬರ್ 13, 15,18,20 ಮತ್ತು 22 ರಂದು ರದ್ದುಪಡಿಸಲಾಗಿದೆ.
ವಾರದಲ್ಲಿ ಮೂರು ದಿನ ಸಂಚರಿಸುವ ಕಾರವಾರ- ಯಶವಂತಪುರ ನಂಬರ್ 16516 ನಂಬರ್ ರೈಲು ಸೇವೆಯನ್ನು ಡಿಸೆಂಬರ್ 14, 16, 19, 21 ಮತ್ತು 23 ರಂದು ರದ್ದುಪಡಿಸಲಾಗಿದೆ.
ಯಶವಂತಪುರ- ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲನ್ನು (16539/ 16540) ಕ್ರಮವಾಗಿ ಡಿಸೆಂಬರ್ 16 ಮತ್ತು 17 ರಂದು ರದ್ದುಪಡಿಸಲಾಗಿದೆ.
ರೈಲು ಸಂಖ್ಯೆ. 16585/ 586 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು-ಮುರ್ಡೇಶ್ವರ-ಬೆಂಗಳೂರು ರಾಜಧಾನಿಯನ್ನು ಕರಾವಳಿಯೊಂದಿಗೆ ಸಂಪರ್ಕಿಸುವ ಏಕೈಕ ರೈಲು ಆಗಿರುತ್ತದೆ; ಆದರೆ ಈ ಅವಧಿಯಲ್ಲಿ ಮೈಸೂರು ಪ್ರದೇಶವನ್ನು ಬಿಟ್ಟುಬಿಡುವುದು.