ವೆಚ್ಚ ಕಡಿತದಿಂದ ಸಕ್ಕರೆ ಕಾರ್ಖಾನೆ ಅಭಿವೃದ್ಧಿ

26Manju3-Web
ಬೆಳಗಾವಿ ನಗರದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಡಾ.ಆರ್.ಬಿ.ಖಾಂಡಗಾವೆ ಉದ್ಘಾಟಿಸಿದರು. ಆದಿತ್ಯ ಬಸ್ತಿ, ಸಯ್ಯದ್ ಶಫಿ, ರಮಾಕಾಂತ ಮಿಶ್ರಾ ಇತರರಿದ್ದರು.
Published on

ಬೆಳಗಾವಿ: ಸ್ಪರ್ಧಾತ್ಮಕ ದಿನಗಳಲ್ಲಿ ಸಕ್ಕರೆ ಕಾರ್ಖಾನೆ ಲಾಭದಾಯಕವಾಗಿ ಮುನ್ನಡೆಯಲು ಸಕ್ಕರೆ ಉತ್ಪಾದನೆ ವೆಚ್ಚ ಕಡಿಮೆಗೊಳಿಸುವುದು ಮುಖ್ಯ ಎಂದು ಎಸ್. ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ನಿರ್ದೇಶಕ ಡಾ.ಆರ್.ಬಿ.ಖಾಂಡಗಾವೆ ಹೇಳಿದರು.

ನಗರದ ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಕ್ಕರೆ ಕಾರ್ಖಾನೆಯಲ್ಲಿ ಬಳಸುವ ಎಲ್‌ಟಿ ಮೋಟರ್, ಎಲ್‌ಟಿ ಮೋಟರ್ ಕಾರ್ಯದಕ್ಷತೆ, ಎಚ್‌ಟಿ ಮೋಟರ್, ಡ್ರೈವ್ ಮತ್ತು ಸ್‌ಟಾ ಸ್ಟಾರ್ಟರ್ ಕುರಿತು ಸಕ್ಕರೆ ಕಾರ್ಖಾನೆ ತಾಂತ್ರಿಕ ವಿಭಾಗದ ಸಿಬ್ಬಂದಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕ ತಂತ್ರಜ್ಞಾನ ಹೊಂದಿದ ಹಾಗೂ ಉತ್ತಮ ಕಾರ್ಯದಕ್ಷತೆಯುಳ್ಳ ವಿದ್ಯುತ್ ಉಪಕರಣಗಳು, ಮೋಟರ್ ಡ್ರೈವ್‌ಗಳನ್ನು ಬಳಸುವುದರಿಂದ ವಿದ್ಯುತ್ ಶಕ್ತಿಯ ಬಳಕೆ ಕಡಿಮೆಗೊಳಿಸಬಹುದು. ಇದರಿಂದ ಉತ್ಪಾದನೆ ವೆಚ್ಚವೂ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಸದರಿ ಕಾರ್ಯಾಗಾರ ಮಹತ್ವ ಪಾತ್ರ ವಹಿಸಿದ್ದು, ಉಪಕರಣಗಳ ಉತ್ಪಾದಕರು ಹಾಗೂ ಕಾರ್ಖಾನೆ ಗ್ರಾಹಕರ ಮಧ್ಯೆ ಸಂವಹನಕ್ಕೆ ಉತ್ತಮ ವೇದಿಕೆಯಾಗಿದೆ ಎಂದರು.

ಎಲ್ಲ ತಾಂತ್ರಿಕ ಸಿಬ್ಬಂದಿ ಉಪಕರಣಗಳ ಬಗೆಗಿನ ಮಾಹಿತಿ ಪಡೆದು ಕಾರ್ಖಾನೆ ಕಾರ್ಯಕ್ಷಮತೆ ಅಭಿವದ್ಧಿಗೆ ಸಹಕರಿಸಬೇಕು. ಇತರ ಸಿಬ್ಬಂದಿಗೂ ಮಾಹಿತಿ ನೀಡಬೇಕು ಎಂದರು.

ಆದಿತ್ಯ ಬಸ್ತಿ, ಸಯ್ಯದ್ ಶಫಿ, ರಮಾಕಾಂತ ಮಿಶ್ರಾ, ಸಂಸ್ಥೆಯ ಸಿಬ್ಬಂದಿ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದ ವಿವಿಧ ಕಾರ್ಖಾನೆಗಳಿಂದ 100 ತಾಂತ್ರಿಕ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net