ಕಾಸ್ಮಸ್​ ಶತಮಾನೋತ್ಸವ ಕಪ್​ಗೆ ಚಾಲನೆ

27 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಕಾಸ್ಮಸ್​ ಕ್ಲಬ್​ನಲ್ಲಿ ಆಯೋಜಿಸಿರುವ ಕೆಟಿಟಿಎ ಸಂಯೋಜಿತ ಕಾಸ್ಮಸ್​ ಶತಮಾನೋತ್ಸವ ಕಪ್​ ಟೇಬಲ್​ ಟೆನಿಸ್​ ಪಂದ್ಯಾವಳಿಗೆ ಭಾನುವಾರ ಚಾಲನೆ ನೀಡಿಲಾಯಿತು.

ಐಎಫ್​ಎಸ್​ ಯತೀಶ್​ ಕುಮಾರ್​ ಚಾಲನೆ ನೀಡಿ ಮಾತನಾಡಿ, ಆಟದಲ್ಲಿ ಗೆಲವು ಸೋಲು ಸಹಜ. ಎಲ್ಲರೂ ಕ್ರೀಡಾಮನೋಭಾವದಿಂದ ಪಾಲ್ಗೊಳ್ಳುವುದು ಮುಖ್ಯವಾಗಿದೆ ಎಂದರು.

ಕ್ಲಬ್​ ಸಮಿತಿ ಸದಸ್ಯರಾದ ಎ.ಎಸ್​.ಹಿರೇಮಠ, ಎಸ್​.ಬಿ. ಕಿತ್ತೂರು, ಎಚ್​.ಎಫ್​.ಹೆಬ್ಬಾಳ, ಎಂ.ಎಸ್​.ಹಾಲಭಾವಿ, ವಿಜಯ ಸುಣಗಾರ, ಬಿ.ಎನ್​.ಜಮಖಂಡಿ, ರವಿ ನಾಯಕ, ಸೈಯದ ಸನದಿ, ಇತರರು ಇದ್ದರು.

ಟೂರ್ನಿಯಲ್ಲಿ ಬೆಂಗಳೂರು, ಮೈಸೂರಿ, ದಾವಣಗೆರೆ, ಮಂಗಳೂರು, ಬಾಗಲಕೋಟೆ, ಹಳಿಯಾಳ, ದಾಂಡೇಲಿ ಸೇರಿ ವಿವಿಧ ಜಿಲ್ಲೆಯ ಸುಮಾರು 250ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 8 ವಿಭಾಗದಲ್ಲಿ ಪಂದ್ಯಗಳು ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net