

ಕೋಲಾರ: ಪ್ರಜೆ, ಪ್ರಭು(ಜನಪ್ರತಿನಿಧಿ) ಭ್ರಷ್ಟರಾಗುತ್ತಿರುವುದರಿಂದ ಪ್ರಜಾಪ್ರಭುತ್ವಕ್ಕೆ ಗಂಡಾಂತರ ಬರುವ ಅಪಾಯ ಹಿಂದೆಂದಿಗಿಂತ ಈಗ ಹೆಚ್ಚಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆತಂಕ ವ್ಯಕ್ತಪಡಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ ಬುಧವಾರ ಆಯೋಜಿಸಿದ್ದ ಚುನಾವಣೆ ವ್ಯವಸ್ಥೆಯಲ್ಲಿ ಸುಧಾರಣೆಯ ಅಗತ್ಯ ಕುರಿತ ಸಂವಾದದಲ್ಲಿ ಮಾತನಾಡಿ, ಸಹಕಾರ ಸಂದಿಂದ ಸಂಸತ್ ಚುನಾವಣೆವರೆಗೆ ಹಣ, ಜಾತಿ, ಮದ್ಯ ಮತ್ತು ತೋಳ್ಬಲ ಪ್ರಧಾನವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಯುವಜನ ‘ನೋಟಿಗಾಗಿ ಓಟು ವಾಡುವುದಿಲ್ಲ’ ಎಂಬ ಬೃಹತ್ ಆಂದೋಲನ ರೂಪಿಸಬೇಕಿದೆ ಎಂದು ಕರೆ ನೀಡಿದರು.
ನ್ಯಾಯಸಮ್ಮತ ಚುನಾವಣಾ ವ್ಯವಸ್ಥೆ ದೂರವಾಗುವ ಆತಂಕ ಇದೀಗ ಎದುರಾಗಿದೆ. ಮೌಲ್ಯಗಳ ಅಧಃಪತನಕ್ಕೆ ಚುನಾವಣೆ ವ್ಯವಸ್ಥೆ ಪ್ರಮುಖ ಕಾರಣವಾಗಿದೆ. ನಾವೆಲ್ಲ ಭ್ರಷ್ಟಾಚಾರದ ವಿಷ ವರ್ತುಲದಲ್ಲಿದ್ದೇವೆ. ರಾಜಕಾರಣಿಗಳು ವಾತ್ರ ಅಪರಾಧಿಗಳು ಎಂದು ಬೊಟ್ಟುವಾಡಿ ತೋರಿಸಿ ಹೇಳುವುದಕ್ಕಿಂತ, ಇಡೀ ಸವಾಜ ಮತ ಮಾರಿಕೊಳ್ಳದಿರುವ ಕುರಿತು ಚಿಂತಿಸಬೇಕು ಎಂದರು.
ಮೌನದಿಂದ ಮೌಲ್ಯ ಪತನ: ಅಭ್ಯರ್ಥಿಗಳು ಹಣ ಕೊಟ್ಟರೂ ಮತದಾರರು ನಿರಾಕರಿಸಬೇಕು. ಎಲ್ಲಿಯ ತನಕ ಯುವಜನರಲ್ಲಿ ಜಾಗೃತಿ ಬರುವುದಿಲ್ಲವೋ ಅಲ್ಲಿಯವರೆಗೆ ಸುಧಾರಣೆ ಅಸಾಧ್ಯ. ಯುವಜನತೆ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುಗಾರರು ಆಗಬೇಕು. ಇಲ್ಲದಿದ್ದರೆ ನಿಮ್ಮ ಬದುಕು ಆಂಧಕಾರವಾಗುತ್ತದೆ. ನಿವತ್ತ ಉದ್ಯೋಗಿಗಳು, ಹಿರಿಯರು ಭ್ರಷ್ಟ ವ್ಯವಸ್ಥೆ ವಿರುದ್ಧ ಮಾತನಾಡಬೇಕು. ಮೌನವಾಗಿದ್ದರೆ ಸವಾಜದ ಆದರ್ಶ, ಪ್ರಜಾಪ್ರಭುತ್ವದ ಮೌಲ್ಯಗಳು ಅಧಃಪತನವಾಗುತ್ತವೆ ಎಂದು ಸ್ಪೀಕರ್ ಹೇಳಿದರು.
ದೇಶ 75 ವರ್ಷಗಳಲ್ಲಿ ವಾಡಿರುವ ಸಾಧನೆಗೆ ಸಂವಿಧಾನವೇ ಕಾರಣ. ಸಂವಿಧಾನವನ್ನು ಬೇರೆ ಯಾರಾದರೂ ಬರೆದಿದ್ದರೆ ಅದು ಬರೀ ಅಕ್ಷರ ಜೋಡಣೆಯಾಗಿರುತ್ತಿತ್ತು. ಆದರೆ, ಅಂಬೇಡ್ಕರ್ ಜೀವನಾನುಭವದ ಮೇಲೆ ಬರೆದಿದ್ದಾರೆ. ಹೀಗಾಗಿ, ಅದು ಶ್ರೇಷ್ಠವಾಗಿ ಉಳಿದಿದೆ. ಎಲ್ಲರಿಗೂ ಸವಾನತೆಯ ಅವಕಾಶ ಕಲ್ಪಿಸಿದೆ. ಸಂವಿಧಾನದ ಅದ್ಭುತ ಕೊಡುಗೆಯಿಂದ ಭಾರತ ಈ ಎತ್ತರಕ್ಕೆ ಏರಿದೆ ಎಂದರು.
ಸ್ವಾತಂತ್ರ್ಯ ಪಡೆಯುವ ಮುನ್ನ ನಮ್ಮ ಪೂರ್ವಜರು ಪರಕೀಯರ ಆಡಳಿತ, ಗುಲಾಮಗಿರಿ ಅನುಭವಿಸಿದ್ದರು. ಪರಕೀಯರು ನಮ್ಮ ನಂಬಿಕೆ, ಶ್ರದ್ಧೆ, ಭಕ್ತಿಯನ್ನು ಘಾಸಿಗೊಳಿಸಿ, ದೇಗುಲ ಅಪವಿತ್ರ ವಾಡಿ, ಧ್ವಂಸಗೊಳಿಸಿದರು. ಮತಾಂತರ ವಾಡಿದರು. ಸ್ವಾತಂತ್ರ್ಯ ಎನ್ನುವುದು ಬ್ರಿಟಿಷರಿಂದ ಹೊಂದಿದ ಬಿಡುಗಡೆ ವಾತ್ರವಲ್ಲ, ನೂರಾರು ವರ್ಷಗಳ ಗುಲಾಮಗಿರಿಯಿಂದಲೂ ಹೊರಬಂದಿದ್ದೇವೆ. ಇದಕ್ಕೆ ಶಿವಾಜಿಯಂತಹ ರಾಜಮಹಾರಾಜರು ಸೇರಿ ಹಲವರು ತ್ಯಾಗ ಬಲಿದಾನ ವಾಡಿದ್ದಾರೆ, ಸ್ವಾಮಿ ವಿವೇಕಾನಂದರಂಥ ಮಹಾನುಭಾವರು ಸನಾತನ ಸಂಸ್ಕೃತಿ ರಕ್ಷಣೆಗೆ ಜಾಗತಿ ಮೂಡಿಸದಿದ್ದರೆ ಭಾರತ ಈ ರೀತಿ ಇರುತ್ತಿರಲಿಲ್ಲ ಎಂದರು.
ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಹಿಂದಿನ ದಿನಗಳಿಗೆ ಹೋಲಿಸಿದರೆ ಪರಿಸ್ಥಿತಿ ಕೆಟ್ಟು ಹೋಗಿದೆ. ಮತದಾರರು ಮತಕ್ಕೆ ಎಷ್ಟು ಹಣ ಕೊಡುತ್ತೀರಿ ಎಂದು ಕೇಳುತ್ತಾರೆ. ರಾಜಕೀಯ ಕೆಳಮಟ್ಟಕ್ಕೆ ಇಳಿಯಲು ರಾಜಕಾರಣಿಗಳೇ ಕಾರಣ ಎಂದರು.
ಸಾರ್ವಜನಿಕರು, ವಿವಿಧ ಸಂ ಸಂಸ್ಥೆ ಮುಖಂಡರು, ವಿದ್ಯಾರ್ಥಿಗಳ ಜತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಂವಾದ ನಡೆಸಿದರು. ವ್ಯಕ್ತಿಯೊಬ್ಬ 2 ಕಡೆ ಚುನಾವಣೆಗೆ ನಿಲ್ಲಲು ಅವಕಾಶ ನೀಡಬಾರದು. ಕಡ್ಡಾಯ ಮತದಾನ, ನೋಟಾ ಮಹತ್ವ, ಅಪರಾಧ ಪ್ರಕರಣದಲ್ಲಿ ಭಾಗಿಯಾದವರ ಸ್ಪರ್ಧೆಗೆ ತಡೆ, ಜನಪ್ರತಿನಿಧಿಗಳ ನಿವೃತ್ತಿ ವಯಸ್ಸು, ಕನಿಷ್ಠ ವಿದ್ಯಾರ್ಹತೆ ಬಗ್ಗೆ ಪ್ರಶ್ನೆ ಕೇಳಿದರು.
ಜಿಲ್ಲೆಯ ಹಿರಿಯ ಮತದಾರರಾದ 101 ವರ್ಷದ ಬೈಯಮ್ಮ ಮತ್ತು ನಾರಾಯಣಪ್ಪ ದಂಪತಿಯನ್ನು ಕಾಗೇರಿ ಸನ್ಮಾನಿಸಿದರು. ಅವರ ಕೈಯಲ್ಲೇ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶಾಸಕ ಎಚ್.ನಾಗೇಶ್, ವಿಧಾನ ಪರಿಷತ್ ಸದಸ್ಯರಾದ ಇಂಚರ ಗೋವಿಂದರಾಜು, ಛಲವಾದಿ ನಾರಾಯಣಸ್ವಾಮಿ, ಜಿಲ್ಲಾಧಿಕಾರಿ ವೆಂಕಟ್‌ರಾಜಾ, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಿರಂಜನ ವಾನಳ್ಳಿ, ಉಪವಿಭಾಗಾಧಿಕಾರಿ ವೆಂಕಟಲಕ್ಷ್ಮೀ, ಪತ್ರಕರ್ತರ ಸಂ ಜಿಲ್ಲಾಧ್ಯಕ್ಷ ಬಿ.ವಿ. ಗೋಪಿನಾಥ್ ಇದ್ದರು.
ಸ್ವಾಭಿಮಾನದತ್ತ ದೇಶ: ಗಾಂಧೀಜಿ ಸ್ವಾಭಿವಾನ ಜಾಗೃತಗೊಳಿಸಿ ಜನರನ್ನು ಒಗ್ಗೂಡಿಸಿದರು. ಸಾವರ್ಕರ್ ಅವರಂಥ ಮಹಾಪುರುಷರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ನಮ್ಮತನ ಜಾಗೃತಗೊಳಿಸುವ ಕಾರ್ಯ 75 ವರ್ಷಗಳಲ್ಲಿ ವಿವಿಧ ಸ್ವರೂಪದಲ್ಲಿ ನಡೆದಿದೆ. ರೈತರು ಸ್ವಾತಂತ್ರ್ಯ ಹೋರಾಟದ ವೇಳೆ ಆಹಾರದ ಕೊರತೆ ಎದುರಾಗಿದ್ದಾಗ ಹೆಚ್ಚು ದುಡಿಮೆ ವಾಡಿದ್ದರಿಂದ ಆಹಾರ ಭದ್ರತೆ ಬಂತು. ವಿಶ್ವಕ್ಕೇ ಆಹಾರ ಒದಗಿಸಲು ಸಾಧ್ಯವಾಯಿತು. ಕೈಗಾರಿಕೆ, ಆರೋಗ್ಯ ಕ್ಷೇತ್ರದಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿದ್ದೇವೆ. ಕೊರೊನಾವನ್ನು ಸಮರ್ಪಕವಾಗಿ ಎದುರಿಸಿದ್ದೇವೆ. ಸೈನಿಕರ ಸಾಧನೆ ಏನೆಂಬುದು ಪಾಕಿಸ್ತಾನದ ಮೇಲಿನ ದಾಳಿಯಲ್ಲಿ ಗೊತ್ತಾಗಿದೆ. ಚೀನಾದವರಿಗೂ ತಮ್ಮ ತಾಕತ್ತು ತೋರಿಸಿದ್ದಾರೆ. ತಾಂತ್ರಿಕ ಕ್ಷೇತ್ರದಲ್ಲಿ ಸಾಧನೆ ವಾಡಿದ್ದೇವೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಒಂದು ದೇಶ, ಒಂದು ಚುನಾವಣೆ ನಡೆಯಬೇಕು. ಲೋಕಸಭೆ, ವಿಧಾನಸಭೆ, ತಾಲೂಕು, ಜಿಪಂ, ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಏಕಕಾಲಕ್ಕೆ ನಡೆಯಬೇಕು ಎಂದರು. ಚುನಾವಣೆಗೆ ಸ್ಪರ್ಧಿಸುವವರು ಆನ್‌ಲೈನ್‌ನಲ್ಲೇ ಭರವಸೆ ನೀಡಿ ಮತದಾನ ವಾಡುವ ವ್ಯವಸ್ಥೆ ಆಗಬೇಕು. ಗೆದ್ದ ಮೇಲೆ ಕ್ಷೇತ್ರದಲ್ಲಿ ಓಡಾಡಿಕೊಂಡು ಕೆಲಸ ವಾಡುವ ವ್ಯಕ್ತಿಗೆ ಆದ್ಯತೆ ನೀಡಬೇಕು.
ಎಸ್.ಮುನಿಸ್ವಾಮಿ, ಸಂಸದ