ಖಾಸಗಿ ಶಾಲೆಗಳ ಪರವಾನಗಿ ನವೀಕರಣದಲ್ಲಿ ಭ್ರಷ್ಟಾಚಾರ: ಕೆ.ಸಿ. ಪುಟ್ಟಸಿದ್ದಶೆಟ್ಟಿ ಆರೋಪ

school
ಸಾಂದರ್ಭಿಕ ಚಿತ್ರ
Published on

ಮೈಸೂರು: ಸರ್ಕಾರ ಖಾಸಗಿ ಶಾಲೆಗಳ ಪರವಾನಗಿ ನವೀಕರಣ ಹೆಸರಿನಲ್ಲಿ ಭ್ರಷ್ಟಾಚಾರ ನಡೆಸುತ್ತಿದೆ ಎಂದು ದಕ್ಷಿಣ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಸಿ.ಪುಟ್ಟಸಿದ್ದಶೆಟ್ಟಿ ಆರೋಪಿಸಿದರು.

ಜಿಲ್ಲೆಯಲ್ಲಿ 1,818 ಸರ್ಕಾರಿ ಶಾಲಾ ಕಟ್ಟಡಗಳು ಶಿಥಿಲವಾಗಿವೆ. ಆದರೂ ಸರ್ಕಾರಿ ಶಾಲೆಗಳಿಗಿಲ್ಲದ ಕಠಿಣ ನಿಯಮಗಳನ್ನು ಖಾಸಗಿ ಶಾಲೆಗಳಿಗೆ ಹೇರಲಾಗಿದೆ. ಲಂಚ ತೆಗೆದುಕೊಂಡು ಒಂದು ವರ್ಷಕ್ಕೆ ಮಾತ್ರ ನವೀಕರಣ ಮಾಡುವ ಕೆಲಸ ನಡೆಯುತ್ತಿದೆ.

ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಿಳಿಯುವುದಿಲ್ಲವೇ, ಜಾಣ ಕುರುಡುತನವೇಕೆ. ಅವರ ಕ್ಯಾಬಿನೆಟ್‌ನಲ್ಲೂ ಭ್ರಷ್ಟರಿದ್ದು, ಎಲ್ಲ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಕೂಡಲೇ ಇದಕ್ಕೆ ಕಡಿವಾಣ ಹಾಕಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಮುಖಂಡರಾದ ಎಸ್.ಕೆ.ನಂಜಪ್ಪಶೆಟ್ಟಿ, ಕೆಂಪಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net