ಸರ್ಕಾರಿ ಕಾರ್ಯಕ್ರಮದ ಬ್ಯಾನರ್ ನಲ್ಲೇ ಅಕ್ಷರ ದೋಷ:
ವಿಜಯನಗರ 1 ವರ್ಷದ ಅಭ್ಯುದಯ

IMG_20221002_192502.jpg
Published on

ಹೊಸಪೇಟೆ: ಜಿಲ್ಲಾಡಳಿತದಿಂದ ನಗರದಲ್ಲಿ ಆಯೋಜಿಸಿರುವ '1 ವರ್ಷದ ಅಭ್ಯುದಯ' ಕಾರ್ಯಕ್ರಮದ ಬ್ಯಾನರ್ ನಲ್ಲಿ ಕನ್ನಡ ಅಕ್ಷರ ದೋಷಗಳು ರಾರಾಜಿಸುತ್ತಿದ್ದು, ಶಬ್ದಗಳು ಅಪಭ್ರಂಶಗೊಂಡಿವೆ.
ನೂತನ ವಿಜಯನಗರ ಜಿಲ್ಲೆ ಸ್ಥಾಪನೆ ಗೊಂಡು ಒಂದು‌ ವರ್ಷ ಸಂಭ್ರಮದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿ.ಪಂ. ಹಾಗೂ ನಗರಸಭೆ ಸಹಯೋಗದಲ್ಲಿ ನಗರದ ಸಂಡೂರು ರಸ್ತೆಯ ನಂದಿನಿ ಕಲ್ಯಾಣ ಮಂಟಪದಲ್ಲಿ '೧ ವರ್ಷದ ಅಭ್ಯುದಯ' ಸಮಾರಂಭವನ್ನು ಆಯೋಜಿಸಿದೆ.
ಕಾರ್ಯಕ್ರಮದ ವೇದಿಕೆ ಬ್ಯಾನರ್ ನಲ್ಲಿ ಅಕ್ಷರ ದೋಷಗಳು ನುಸುಳಿವೆ. 'ನಗರಸಭೆ ಹೊಪೇಟೆ', 'ವಿಜಯನಗರ ಜಿಲ್ಲೆ ಆರಂಭಗೊಂಡ ೧ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ' ಎಂದು ಬರೆಯಲಾಗಿದೆ. ಸರಕಾರಿ ಕಾರ್ಯಕ್ರಮದಲ್ಲೇ ಆಡಳಿತ ಭಾಷೆಯಾಗಿರುವ ಕನ್ನಡವನ್ನು ಅಣುಕಿಸಿದಂತಾಗಿದೆ.
ಕಾರ್ಯಕ್ರಮದಲ್ಲಿ ಸಾಕ್ಸಪೋನ್ ವಾದನ ಪ್ರಸ್ತುತ ಪಡಿಸಿದ ಬಾಲ ಕಲಾವಿದರು‌ ಕೂಡಾ ತಾವು ನುಡಿಸುವ ರಾಗ, ತಾಳವನ್ನೂ ಇಂಗ್ಲಿಷ್ ನಲ್ಲೇ ವಿವರಿಸಿದ್ದು, ಕನ್ನಡವನ್ನು ಕಡೆಗಣಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net