ಡೋಹರ ಸಮುದಾಯಕ್ಕಾದ ಅನ್ಯಾಯ ಸರಿಪಡಿಸಿ | ತಹಸೀಲ್ದಾರ್‌ರಿಗೆ ಮನವಿ

Dohar Samuday Manavi
ಆಲಮೇಲದಲ್ಲಿ ಡೋಹರ ಕಕ್ಕಯ್ಯ ಸಮುದಾಯಕ್ಕೆ ಶೇ.6 ರಷ್ಟು ಮೀಸಲಾತಿ ಒದಗಿಸಬೇಕೆಂದು ಆಗ್ರಹಿಸಿ ಸಿರಸ್ತೆದಾರ ಪಿ.ಎಸ್. ಮೂಕಿಹಾಳ ಅವರಿಗೆ ಮನವಿ ಸಲ್ಲಿಸಿದರು. ತಾಲೂಕು ಅಧ್ಯಕ್ಷ ಅಮರ ನಾರಾಯಣಕರ, ಮುಖಂಡರಾದ ಸುನೀಲ ನಾರಾಯಣಕರ, ದಯಾನಂದ ನಾರಾಯಣಕರ, ಸಭಾಷ ನಾರಾಯಣಕರ, ರಾಹುಲ್ ಹೊಟಕರ ಇತರರಿದ್ದರು.
Published on

ಆಲಮೇಲ: ಡೋಹರ ಸಮುದಾಯವನ್ನು 1ನೇ ಗುಂಪಿನಲ್ಲಿರಿಸಿ ಶೇ.6 ರಷ್ಟು ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಡೋಹರ ಕಕ್ಕಯ್ಯ ಸಮಾಜದ ತಾಲೂಕು ಪದಾಧಿಕಾರಿಗಳಿಂದ ಗುರುವಾರ ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಪಾದಯಾತ್ರೆ ಮೂಲಕ ಡೋಹರ ಕಕ್ಕಯ್ಯ ಸಮಾಜದ ತಾಲೂಕು ಪದಾಧಿಕಾರಿಗಳು ತಹಸೀಲ್ದಾರ್ ಕಚೇರಿಗೆ ತೆರಳಿ ಸಿರಸ್ತೆದಾರ ಪಿ.ಎಸ್. ಮೂಕಿಹಾಳ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕು ಅಧ್ಯಕ್ಷ ಅಮರ ನಾರಾಯಣಕರ ಮಾತನಾಡಿ, ಚುನಾವಣೆ ಸಂದರ್ಭ ರಾಜ್ಯ ಸರ್ಕಾರ ಅಸ್ಪಶ್ಯವಾಗಿಯೇ ಉಳಿದುಕೊಂಡಿರುವ ಹಾಗೂ ಕಡು ಬಡತನದಲ್ಲಿ ಜೀವನ ಸಾಗಿಸುತ್ತಿರುವ ದಲಿತ ಎಡಗೈ ಸಮುದಾಯಗಳಾದ ಚರ್ಮ ಸಂಬದಿತ ಕಸುಬು ಮಾಡುವ ಮಾದಿಗ ಹಾಗೂ ಸಮಗಾರ ಜಾತಿಗಳೊಂದಿಗೆ ನಮ್ಮ ಜಾತಿಯೂ ಇದೆ. ಆದರೆ, ಸದ್ಯ ರಾಜ್ಯ ಸರ್ಕಾರ ಡೋಹರ ಕಕ್ಕಯ್ಯ ಸಮಾಜವನ್ನು ಅವೈಜ್ಞಾನಿಕವಾಗಿ 4ನೇ ಗುಂಪಿನಲ್ಲಿ ಸೇರಿಸಿರುವ ನಿರ್ಧಾರವನ್ನು ಕೂಡಲೇ ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಮುಖಂಡರಾದ ಸುನೀಲ ನಾರಾಯಣಕರ, ದಯಾನಂದ ನಾರಾಯಣಕರ, ಸುಭಾಸ ನಾರಾಯಣಕರ, ರಾಹುಲ್ ಹೊಟಕರ, ಸಿದ್ಧರಾಮ ನಾರಾಯಣಕರ, ವಿಲಾಸ ನಾರಾಯಣಕರ, ಮಂಜುನಾಥ ನಾರಾಯಣಕರ, ಜಗದೀಶ ಸೋನಮನೆ, ವಿಜಯ ನಾರಾಯಣಕರ, ವಿಲಾಸ ನಾರಾಯಣಕರ, ಗಾಲೀಬ ನಾರಾಯಣಕರ, ಸತೀಶ ನಾರಾಯಣಕರ, ಸಂತೋಷ ನಾರಾಯಣಕರ, ಸುಮೀತ್ ನಾರಾಯಣಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net