ಡೋಹರ ಕಕ್ಕಯ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಿ

almel 27-2 prote
ಆಲಮೇಲ ಪಟ್ಟಣದಲ್ಲಿ ಡೋಹರ ಕಕ್ಕಯ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ಸಮಾಜ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಕೆ. ವಿಜಯಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ದೇವಾನಂದ ಖಂದಾರೆ, ಅಮರ ನಾರಾಯಣಕರ, ದಯಾನಂದ ನಾರಾಯಣಕರ, ಅಶೋಕ ನಾರಾಯಣಕರ ಇತರರಿದ್ದರು.
Published on

ಆಲಮೇಲ: ಡೋಹರ ಜಾತಿಯ ಸಮುದಾಯವನ್ನು ಚರ್ಮಕಾರರಲ್ಲದ ಅಲೆಮಾರಿ ಜನಾಂಗದ ಗುಂಪಿಗೆ ಅವೈಜ್ಞಾನಿಕವಾಗಿ ಸೇರಿಸಿರುವ ತಪ್ಪನ್ನು ಸರಿಪಡಿಸಬೇಕೆಂದು ಸಮಾಜದ ಮುಖಂಡ ಅಮರ ನಾರಾಯಣಕರ ಆಗ್ರಹಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ಡೋಹರ ಕಕ್ಕಯ್ಯ ಸಮಾಜಕ್ಕೆ ಆಗಿರುವ ಅನ್ಯಾಯ ಸರಿಪಡಿಸಬೇಕೆಂದು ಆಗ್ರಹಿಸಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಡೋಹರ ಕಕ್ಕಯ್ಯ ಸಮುದಾಯ ಅತಿ ಸಣ್ಣದೆಂದು ತಿಳಿದು 89 ಸಮುದಾಯದಲ್ಲಿ ಸೇರ್ಪಡೆ ಮಾಡಿದ್ದಾರೆ. ಪರಿಶಿಷ್ಟ ಜಾತಿ ವರ್ಗೀಕರಣದಲ್ಲಿ ಡೋಹರ ಕಕ್ಕಯ್ಯ ಸಮುದಾಯವನ್ನು ಅವೈಜ್ಞಾನಿಕವಾಗಿ 4ನೇ ಗುಂಪಿಗೆ ಇರಿಸಲಾಗಿದೆ. ಚರ್ಮ ಸಂಬಂಧಿತ ಕಸಬು ಮಾಡುವ ಮಾದಿಗ ಹಾಗೂ ಸಮಗಾರ, ಚಮ್ಮಾರ, ಮೋಚಿ ಜಾತಿಗಳಿದ್ದು, ಅವರನ್ನು 2ನೇ ಗುಂಪಿನಲ್ಲಿ ಸೇರಿಸಿ ಶೇ. 6ರಷ್ಟು ಮೀಸಲಾತಿ ಒದಸಬೇಕೆಂದು ಆಗ್ರಹಿಸಿದರು.

ಬಳಿಕ ತಹಸೀಲ್ದಾರ್ ಕೆ. ವಿಜಯಕುಮಾರ ಅವರಿಗೆ ಮನವಿ ಸಲ್ಲಿಸಲಾಯಿತು.

ಸಮಾಜದ ಮುಖಂಡರಾದ ದಯಾನಂದ ನಾರಯಣಕರ, ಅಶೋಕ ನಾರಾಯಣಕರ, ರಮೇಶ ಕಂದಾರೆ, ಶರಣು ಕಟಕೆ, ಸಿದ್ದು ಕಟಕೆ, ಮಂಜುನಾಥ ನಾರಾಯಣಕರ, ವಿಜಯಕುಮಾರ ನಾರಯಣಕರ, ಸುರೇಶ ಹೊಟಕರ, ದೇವಾನಂದ ಖಂದಾರೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net