

ಜಮಖಂಡಿ : ತಾಂತ್ರಿಕ ದೋಷದಿಂದ ಉಂಟಾಗಿರುವ ಪರೀಕ್ಷಾ ಶುಲ್ಕ ಯಶಸ್ವಿ ಪ್ರಕ್ರಿಯೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಗರದ ತಾಲೂಕಾ ಆಡಳಿತ ಸೌಧದ ಆವರಣದಲ್ಲಿ ಶನಿವಾರ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಶೀಲ್ದಾರ ಕೆ.ವೈ. ಬಿದರಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಯುಯುಸಿಎಮ್‌ಎಸ್ ನಲ್ಲಿ ಪರೀಕ್ಷಾ ಶುಲ್ಕ ಭರಿಸಿದರು ತಾಂತ್ರಿಕ ದೋಷದಿಂದ ಹಣ ವರ್ಗಾವಣೆಯಾದರೂ ಸಹ ಯಶಸ್ವಿಯಾಗುತ್ತಿಲ್ಲ. ಇದರಿಂದ ಶುಲ್ಕವನ್ನು ಮರಳಿ ಪಾವತಿಸುವಂತೆ ವಿವಿಯಿಂದ ಆದೇಶ ಹೊರಡಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಈ ತಾಂತ್ರಿಕ ದೋಷವನ್ನು ಸರಿಪಡಿಸುವಂತೆ ವಿಧ್ಯಾರ್ಥಿಗಳಾದ ಚಿದಾನಂದ ಬಬಲಾದಿ, ಆಕಾಶ ಬೀಳಗಿ, ಸಚೀನ ಆಲಗೂರ, ರವಿ ಗುಗ್ಗರಿ, ಸತೀಶ ಹನುಮರ ಇತತರರು ಒತ್ತಾಯಿಸಿದ್ದಾರೆ.