ಫಲಿತಾಂಶ ಕುಸಿತ ಸರಿಪಡಿಸಿಕೊಳ್ಳಿ

10-KGLPHOTO-3,,,,,
ಕೊಳ್ಳೇಗಾಲ ದೇವಾಂಗ ಪೇಟೆ ನಿವಾಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 616 ಅಂಕ ಪಡೆದ ವಿದ್ಯಾರ್ಥಿನಿ ಆರ್.ಯುಕ್ತಾ ಅವರನ್ನು ಮಾಜಿ ಶಾಸಕ ಎನ್.ಮಹೇಶ್ ಸನ್ಮಾನಿಸಿ ಅಭಿನಂದಿಸಿದರು.
Published on

ಕೊಳ್ಳೇಗಾಲ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 600ಕ್ಕೂ ಹೆಚ್ಚು ಅಂಕ ಪಡೆದ ತಾಲೂಕು ವ್ಯಾಪ್ತಿಯ ವಿದ್ಯಾರ್ಥಿಗಳನ್ನು ಶುಕ್ರವಾರ ಮಾಜಿ ಶಾಸಕ ಎನ್.ಮಹೇಶ್ ಅಭಿನಂದಿಸಿದರು.


ತಾಲೂಕಿನ ಸೂರಪುರ ಗ್ರಾಮದ ಪ್ರೌಢಶಾಲೆಯಲ್ಲಿ ಓದಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 609 ಅಂಕ ಪಡೆದ ತಾಲೂಕಿನ ಬನ್ನಿಸಾರಿಗೆ ಗ್ರಾಮದ ಎನ್.ಮಹದೇವಸ್ವಾಮಿ ನಿವಾಸಕ್ಕೆ ತೆರಳಿ ಅಭಿನಂದಿಸಿದರು. 618 ಅಂಕ ಪಡೆದ ಪಟ್ಟಣದ ನಿವಾಸಿಗಳಾದ ಪ್ರಜನ್, ಸಂಜನಾ ಹಾಗೂ 616 ಅಂಕ ಪಡೆದ ಆರ್.ಯುಕ್ತಾ ಹಾಗೂ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಹಾರ, ಶಾಲು ಹಾಕಿ, ಸಿಹಿ ತಿನ್ನಿಸುವ ಮೂಲಕ ಸನ್ಮಾನಿಸಿದರು.
ಮಾಜಿ ಶಾಸಕ ಎನ್.ಮಹೇಶ್ ಮಾತನಾಡಿ, ಕಳೆದ ಬಾರಿಗಿಂತ ಈ ಸಲ ಜಿಲ್ಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕೆಳಗೆ ಇಳಿದಿದೆ. ಶಿಕ್ಷಣ ಇಲಾಖೆ ಈ ಬಗ್ಗೆ ಗಮಹರಿಸಿ ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಬೇಕು. ಮುಡಿಗುಂಡ ಆದರ್ಶ ವಿದ್ಯಾಲಯಕ್ಕೆ ಶೇ.100 ರಷ್ಟು ಫಲಿತಾಂಶ ದೊರೆತಿದ್ದು, ಈ ಶಾಲೆಯಿಂದಲೆ ಇಬ್ಬರು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿರುವುದು ಸಂತೋಷದ ವಿಚಾರವಾಗಿದೆ ಎಂದರು.


ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮರಿಸ್ವಾಮಿ, ನಗರಸಭೆ ಸದಸ್ಯ ಚಿಂತು ಪರಮೇಶ್, ನಗರಸಭೆ ನಾಮ ನಿರ್ದೇಶಿತ ಮಾಜಿ ಸದಸ್ಯ ಮಧುಚಂದ್ರ, ಮುಖಂಡ ಜಗದೀಶ್ ಶಂಕನಪುರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net