ಜಾತಿ ಪ್ರಮಾಣ ಪತ್ರದಲ್ಲಿನ ದೋಷ ಸರಿಪಡಿಸಿ

26-GPT-3
ಗುಂಡ್ಲುಪೇಟೆ ಜಾರಕಿಹೋಳಿ ಬ್ರಿಗೇಡ್ ಸದಸ್ಯರು ತಹಸೀಲ್ದಾರ್ ರಮೇಶ್ ಬಾಬು ಅವರಿಗೆ ಮನವಿ ಪತ್ರ ಸಲ್ಲಿಸಿದರು.
Published on

ಗುಂಡ್ಲುಪೇಟೆ: ಎಸ್‌ಸಿ ಹಾಗೂ ಎಸ್‌ಟಿ ವರ್ಗದವರಿಗೆ ನೀಡುತ್ತಿರುವ ಆದಾಯ ಹಾಗೂ ಜಾತಿ ಪ್ರಮಾಣ ಪತ್ರದಲ್ಲಿನ ದೋಷ ಸರಿಪಡಿಸುವಂತೆ ಒತ್ತಾಯಿಸಿ ಜಾರಕಿಹೋಳಿ ಬ್ರಿಗೇಡ್ ಸದಸ್ಯರು ತಹಸೀಲ್ದಾರ್ ರಮೇಶ್ ಬಾಬು ಅವರಿಗೆ ಮನವಿ ಸಲ್ಲಿಸಿದರು.

ಎಸ್ಸಿ ಹಾಗೂ ಎಸ್ಟಿ ವರ್ಗಗಳ ಜನರಿಗೆ ಕಂದಾಯ ಇಲಾಖೆ ನೀಡುತ್ತಿರುವ ಆದಾಯ ಹಾಗೂ ಜಾತಿ ಪ್ರಮಾಣ ಪತ್ರದಲ್ಲಿ ಹಲವಾರು ದೋಷಗಳಿದ್ದು ಇದರಿಂದ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಸಮಸ್ಯೆಯಾಗುತ್ತಿದೆ. ಇದನ್ನು ಸರಿಪಡಿಸಲು ಉಪವಿಭಾಗಾಧಿಕಾರಿ ಕಚೇರಿಗೆ ಅಲೆದಾಡುವಂತಾಗಿದೆ. ಆದ್ದರಿಂದ ದೋಷವಿಲ್ಲದ ಪ್ರಮಾಣಪತ್ರಗಳನ್ನು ಕನ್ನಡ ಭಾಷೆಯಲ್ಲಿಯೇ ಕೊಡಿಸಿಕೊಡಬೇಕು ಎಂಬ ಮನವಿಯನ್ನು ತಹಸೀಲ್ದಾರ್ ರಮೇಶ್ ಬಾಬು ಅವರಿಗೆ ಸಲ್ಲಿಸಿದರು.

ಬ್ರಿಗೇಡ್‌ನ ನಾಗೇಂದ್ರ, ಗೋವಿಂದನಾಯ್ಕ, ರಾಜೇಂದ್ರ, ಮಹೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net