ಬಳ್ಳಾರಿ ಕಾಂಗ್ರೆಸ್​ನಲ್ಲಿ ತೀವ್ರ ಅಸಮಾಧಾನ; ಬೇಸತ್ತ ದಂಪತಿಯ ನಿರ್ಧಾರವಿದು...

Padmaroja
Published on

ಬಳ್ಳಾರಿ: ಮೇಯರ್-ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆದ ತಿಂಗಳೊಳಗೆ ಬಳ್ಳಾರಿಯ ಕಾಂಗ್ರೆಸ್​ನಲ್ಲಿ ತೀವ್ರ ಅಸಮಾಧಾನ ಉಂಟಾಗಿದ್ದು, ದಂಪತಿಯೊಬ್ಬರು ಖಡಕ್ ನಿರ್ಧಾರವೊಂದನ್ನು ಕೈಗೊಂಡು ಪಕ್ಷದ ವರಿಷ್ಠರಿಗೆ ಪತ್ರ ಬರೆದಿದ್ದಾರೆ.

ಬಳ್ಳಾರಿ 6ನೇ ವಾರ್ಡ್ ಪಾಲಿಕೆ ಸದಸ್ಯೆ ಎಂ.ಕೆ. ಪದ್ಮರೋಜ ಮತ್ತು ಅವರ ಪತಿ ಮಾಜಿ ಕಾರ್ಪೋರೇಟರ್ ಎಂ.ವಿವೇಕ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿರುವ ದಂಪತಿ. ಪಕ್ಷದಲ್ಲಿ ಹಿರಿತನವನ್ನು ಪರಿಗಣಿಸದೆ ಹೊಸಬರಿಗೆ ಮೇಯರ್​ ಸ್ಥಾನ ಕೊಟ್ಟಿರುವುದಕ್ಕೆ ಇವರಿಬ್ಬರು ಬೇಸರಗೊಂಡು ರಾಜೀನಾಮೆ ನೀಡಿದ್ದಾರೆ.

ಮೇಯರ್ ಸ್ಥಾನಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, ವೀಕ್ಷಕರಾದ ಯು.ಟಿ. ಖಾದರ್ ಇಬ್ಬರೂ ಹಿರಿತನವನ್ನು ಪರಿಗಣಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಐದು ದಶಕಗಳಿಂದ ಕಾಂಗ್ರೆಸ್​ನಲ್ಲಿರುವ ನಮ್ಮ ಮನೆತನದ ಹಿರಿತನವನ್ನು ಪರಿಗಣಿಸಿಲ್ಲ. ಬದಲಿಗೆ ಮೊದಲ ಸಲ ಕಾರ್ಪೋರೇಟರ್ ಆದವರಿಗೆ ಮೇಯರ್ ಆಗುವ ಅವಕಾಶ ನೀಡಿದ್ದು ಬೇಸರ ಮೂಡಿಸಿದೆ ಎಂದು ಇವರಿಬ್ಬರೂ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net