ಪಾಲಿಕೆ ಕಾಂಗ್ರೆಸ್ ಸದಸ್ಯನ ಮನೆಯಲ್ಲಿ ಗೋಮಾಂಸ ಪತ್ತೆ, ಬಿಜೆಪಿ ಪ್ರತಿಭಟನೆ

21 smg 5
Published on

ಶಿವಮೊಗ್ಗ: ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ಶಾಮೀರ್ ಖಾನ್ ಮನೆಯಲ್ಲಿ ಗೋಮಾಂಸ ಪತ್ತೆಯಾಗಿರುವುದನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಿದ ಪಾಲಿಕೆ ಸದಸ್ಯ ಶಾಮೀರ್ ಖಾನ್ ಹಾಗೂ ಅವರ ಪತ್ನಿ, ಮಾಜಿ ಮೇಯರ್ ಖುರ್ಷಿದಾ ಬಾನು ಅವರನ್ನು ಬಂಧಿಸುವಂತೆ ಒತ್ತಾಯಿಸಿ ಕಾರ್ಯಕರ್ತರು ಎಸ್ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಟಿಪ್ಪು ನಗರದ ಶಾಮೀರ್ ಖಾನ್ ಮನೆಯಲ್ಲಿ ಗೋ ವಧೆ ಮಾಡಿ ಮಾಂಸ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ. ಚುನಾಯಿತ ಪ್ರತಿನಿಧಿಗಳು ನಡೆಸಿದ ಈ ಕೃತ್ಯ ಸಾರ್ವಜನಿಕರ ಭಾವನೆಗೆ ಧಕ್ಕೆ ತಂದಿದೆ. ಇಬ್ಬರ ಮೇಲೆ ತುಂಗಾನಗರ ಠಾಣೆಯಲ್ಲಿ ಈಗಾಗಲೇ ಎಫ್‌ಐಆರ್ ದಾಖಲಾಗಿದ್ದರೂ ಈವರೆಗೂ ಬಂಧಿಸಿಲ್ಲ. ಆದ್ದರಿಂದ ಕೂಡಲೇ ಅವರಿಬ್ಬರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಬಿಜೆಪಿ ನಗರಾಧ್ಯಕ್ಷ ಎನ್.ಕೆ.ಜಗದೀಶ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಬಿ.ಹರಿಕೃಷ್ಣ, ನಗರಾಧ್ಯಕ್ಷ ದರ್ಶನ್, ಮೇಯರ್ ಎಸ್.ಶಿವಕುಮಾರ್, ಉಪಮೇಯರ್ ಲಕ್ಷ್ಮೀಶಂಕರನಾಯ್ಕ, ಸದಸ್ಯರಾದ ಸುವರ್ಣಾ ಶಂಕರ್, ಸುರೇಖಾ ಮುರಳೀಧರ್, ಈ.ವಿಶ್ವಾಸ್, ವಿಶ್ವನಾಥ್, ರಾಹುಲ್ ಬಿದರೆ, ಆರತಿ ಅ.ಮ.ಪ್ರಕಾಶ್, ಪ್ರಮುಖರಾದ ಟಿ.ಆರ್.ಜಗನ್ನಾಥ್, ಅಭಿಷೇಕ್, ಉಮಾ, ಜಾಧವ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net