ತಿಂಗಳ ಮೊದಲ ವಾರ ಸ್ವಚ್ಚತಾ ಸಪ್ತಾಹ, ಹುಬ್ಬಳ್ಳಿ ಧಾರವಾಡದಲ್ಲಿ ಸೋಮವಾರದಿಂದ ಆರಂಭ

Published on

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ಸುಂದರ ನಗರ ನಿರ್ಮಾಣಕ್ಕೆ ಸಂಕಲ್ಪ ಮಾಡಲಾಗಿದ್ದು, ಪ್ರತಿ ತಿಂಗಳ ಮೊದಲ ವಾರ ಸ್ವಚ್ಛತಾ ಸಪ್ತಾಹ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದರು.

ಮೊದಲ ಸಪ್ತಾಹಕ್ಕೆ ಡಿ. 4ರಂದು ಬೆಳಗ್ಗೆ ಚಾಲನೆ ನೀಡಲಾಗುವುದು. ಪ್ರತಿಯೊಂದು ವಾರ್ಡ್ ನಲ್ಲಿ ಇದು ನಡೆಯಲಿದೆ. ರಸ್ತೆಗಳು, ಕಸ ಸಂಗ್ರಹವಾಗುವ (ಬ್ಲಾಕ್ ಸ್ಪಾಟ್) ಸ್ಥಳಗಳನ್ನು ಗುರುತಿಸಲಾಗಿದ್ದು, ಸಂರ್ಪೂಣ ಸ್ವಚ್ಛತೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸ್ವಚ್ಛತಾ ಕಾರ್ಯಕ್ಕೆ ಅವಳಿನಗರದ ಸರ್ಕಾರೇತರ ಸಂಸ್ಥೆಗಳ ಸಹಯೋಗ ಪಡೆಯಲಾಗುತ್ತಿದೆ. ಅಭಿಯಾನ ಜಾರಿಗೆ ಮಹಾನಗರ ಪಾಲಿಕೆಯು ಜಾಗೃತ ತಂಡ ರಚನೆ ಮಾಡಲಿದೆ. ಆಯಾ ವಾರ್ಡ್ಗಳಲ್ಲಿ ವಲಯ ಕಚೇರಿ ಸಹಾಯಕ ಆಯುಕ್ತರು, ಆರೋಗ್ಯ ನಿರೀಕ್ಷಕರ ನೇತೃತ್ವದಲ್ಲಿ ಈ ಕಾರ್ಯವು ನಡೆಯಲಿದೆ.

ತೆರೆದ ಗಟಾರುಗಳು, ರಸ್ತೆ ಅಕ್ಕಪಕ್ಕ ಎಲ್ಲೆಡೆ ಸ್ವಚ್ಛ ಮಾಡಲಾಗುವುದು. ಎಲ್ಲೆಂದರಲ್ಲಿ ಕಸ ಚೆಲ್ಲದಂತೆ ಜನರಲ್ಲಿ ಅರಿವು ಮೂಡಿಸುವ ಕಾರ್ಯವೂ ನಡೆಯಲಿದೆ ಎಂದು ಹೇಳಿದರು.

ಖಾಲಿ ಸೈಟ್ ಮಾಲೀಕರಿಗೆ ಎಚ್ಚರಿಕೆ:
ಅವಳಿನಗರದ ಬಡಾವಣೆಗಳಲ್ಲಿ ಇರುವ ಖಾಲಿ ಸೈಟ್ಗಳು ಕಸ ಸಂಗ್ರಹದ ತಾಣಗಳಾಗಿದ್ದು, ಈ ಬಗ್ಗೆ ಸಪ್ತಾಹದಲ್ಲಿ ವಿಶೇಷ ಗಮನ ಹರಿಸಲಾಗುತ್ತಿದೆ.

ಖಾಲಿ ನಿವೇಶನ ಮಾಲೀಕರಿಗೆ ಮೊದಲು ನೋಟಿಸ್ ನೀಡಿ ಸ್ವಚ್ಛ ಮಾಡಿಕೊಳ್ಳುವಂತೆ ತಿಳಿಸಲಾಗುವುದು. ಒಂದು ವೇಳೆ ಸ್ವ ಇಚ್ಚೆಯಿಂದ ಮಾಡಿಕೊಳ್ಳದಿದ್ದರೆ ಪಾಲಿಕೆಯಿಂದ ಸ್ವಚ್ಛ ಮಾಡಿ ನಂತರ ಆಸ್ತಿ ಮೇಲೆ ಬೋಜಾ ಹಾಕಿ ವಸೂಲಿ ಮಾಡಲಾಗುವುದು. ಪ್ರತಿಯೊಂದು ಸೈಟಿಗೆ ಅಳತೆ ಆಧಾರದಲ್ಲಿ 2 ಸಾವಿರ ರೂ.ನಿಂದ 10 ಸಾವಿರ ರೂ. ವರೆಗೆ ದಂಡವನ್ನು ಖಾಲಿ ಸೈಟ್ ಮಾಲೀಕರಿಗೆ ವಿಧಿಸಲು ನಿರ್ಧರಿಸಲಾಗಿದೆ.

ಸ್ವಚ್ಛತಾ ಸಲಕರಣೆಗಳು: ಮಹಾನಗರ ಪಾಲಿಕೆಯಲ್ಲಿ ಈಗಿರುವ 216 ಕಸ ಸಂಗ್ರಹ ಟಿಪ್ಪರ್ಗಳು, 2070 ಕಾಮಿರ್ಕರನ್ನು ಸ್ವಚ್ಛತೆ ಅಭಿಯಾನಕ್ಕೆ ಬಳಸಿಕೊಳ್ಳಲಾಗುವುದು. ಇದರೊಂದಿಗೆ ಇನ್ನೂ 19 ಹೊಸ ಟಿಪ್ಪರ್, 35 ಟ್ರಾ$್ಯಕ್ಟರ್ಗಳು ಸೇರ್ಪಡೆಯಾಗಲಿವೆ. ಅವಳಿನಗರದಲ್ಲಿ ಒಟ್ಟು 3.25 ಲಕ್ಷ ಆಸ್ತಿಗಳು ಇವೆ. ಇದರಲ್ಲಿ 1.10 ಲಕ್ಷ ಖಾಲಿ ನಿವೇಶನಗಳು ಸೇರಿವೆ. 1.80 ಲಕ್ಷ ವಸತಿ, 33 ಸಾವಿರ ವಾಣಿಜ್ಯ ಆಸ್ತಿಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net