

ಬೆಳಗಾವಿ:ಇಲ್ಲಿನ ಮಹಾನಗರ ಪಾಲಿಕೆಯಲ್ಲಿನ ಆಡಳಿತರೂಢ ಸದಸ್ಯರು ರಕ್ಷಣೆನೀಡುವಂತೆ ಆಗ್ರಹಿಸಿ ಬುಧವಾರ ಅಂಬೇಡ್ಕರ್ ಪ್ರತಿಮೆ ಮುಂದೆ ಧರಣಿ ನಡೆಸಿದರು.
ಕಳೆದ ನಾಲ್ಕೈದು ತಿಂಗಳುಗಳಿಂದ ಪಾಲಿಕೆಯಲ್ಲಿ ಅಭಿವೃದ್ಧಿ ವಿಷಯಗಿಂತ ರಾಜಕೀಯ ಪ್ರೇರಿತ, ವೈಯಕ್ತಿಕ ವಿಷಯಗಳೇ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ. ಮತ್ತೊಂದೆಡೆ ಪ್ರಥಮ ಬಾರಿಗೆ ಸದಸ್ಯರಾಗಿ ಆಯ್ಕೆಗೊಂಡಿರುವ ಪಾಲಿಕೆ ಸದಸ್ಯರಿಗೆ ಮುಂದೆ ಏನೇನಾಗುತ್ತದೆ ಎಂಬ ಅಭದ್ರತೆ ಕಾಡುತ್ತಿದೆ ಎಂದು ಬುಧವಾರ ಸಾಮಾನ್ಯ ಸಭೆಯ ಮೊಗ ಶಾಲೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.