ಕರೊನಾ ಹರಡದಂತೆ ನಿಗಾವಹಿಸಿ

17rmd 1-Web
ರಾಮದುರ್ಗ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿದರು. ತಾಪಂ ಇಒ ಮುರಳೀಧರ ದೇಶಪಾಂಡೆ, ಡಾ.ದಂಡಿನ ಬಟಕುರ್ಕಿ, ಡಾ. ಮಂಜುನಾಥ ಭಜಂತ್ರಿ ಇದ್ದರು.
Published on

ರಾಮದುರ್ಗ: ಕರೊನಾ ವೈರಸ್ ಸಾಂಕ್ರಾಮಿಕ ರೋಗವಾಗಿದೆ. ಇದನ್ನು ಹರಡುವುದಕ್ಕೆ ಬಿಡಬಾರದು. ಸಾಮಾಜಿಕ ಅಂತರ ಕಾಪಾಡಿಕೊಂಡರೆ ಸಂಪೂರ್ಣ ನಿಯಂತ್ರಿಸಬಹುದು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.

ತಾಲೂಕಿನ ಹಲಗತ್ತಿ, ಮುದಕವಿ, ಎಂ. ತಿಮ್ಮಾಪುರ, ಕಲ್ಲಾಪುರ, ಖಾನಾಪುರ, ಕಲ್ಮಡ ಉಮತಾರ ಹಾಗೂ ಆನೆಗುದ್ದಿ ಗಾಮಗಳಿಗೆ ಭೇಟಿ ನೀಡಿ ಕರೊನಾ ವೈರಸ್ ನಿಯಂತ್ರಣ ಬಗ್ಗೆ ಜಾಗೃತಿ ಮೂಡಿಸಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್‌ಡೌನ್ ಹೊರಡಿಸಿದ್ದರಿಂದ ಭಾರತದಲ್ಲಿ ಸಾವಿನ ಪ್ರಮಾಣ ಕಡಿಮೆಯಾಗಿದೆ. ಗ್ರಾಮದ ಯುವಕರು ಹೊರಗಿನಿಂದ ಬಂದ ವ್ಯಕ್ತಿಗಳ ಬಗ್ಗೆ ಗಮನ ನೀಡಬೇಕು. ಮಕ್ಕಳು ಮತ್ತು ವೃದ್ಧರ ಆರೋಗ್ಯಕ್ಕೆ ಸಹಕಾರಿಯಾಗಬೇಕು ಎಂದು ಮನವಿ ಮಾಡಿದರು. ತಾಪಂ ಇಒ ಮುರಳೀಧರ ದೇಶಪಾಂಡೆ, ಮುದಕವಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದಂಡಿನ ಬಟಕುರ್ಕಿ, ಡಾ. ಮಂಜುನಾಥ ಭಜಂತ್ರಿ, ಸಿಂಗಾರವ್ವ ವಂಟಮೂರಿ, ಎಲ್.ಎಸ್. ಉಪ್ಪಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net