

ಬೆಳಗಾವಿ: ನಗರದ ವಂಟಮೂರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್-19 ಲಸಿಕೆ ಪ್ರಾಯೋಗಿಕವಾಗಿ ವಿತರಿಸುವ(ಡ್ರೈ ರನ್) ಕಾರ್ಯ ಶನಿವಾರ ಜರುಗಿತು.
ಬೆಳಗಾವಿ ಜಿಲ್ಲೆಯ ಹಿರೇಬಾಗೇವಾಡಿ ಪ್ರಾಥಮಿಕ ಆರೋಗ್ಯ, ಬೆಳಗಾವಿ ವಂಟಮೂರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹುಕ್ಕೇರಿ ತಾಲೂಕು ಆಸ್ಪತ್ರೆಯಲ್ಲಿ ಡ್ರೈ ರನ್ ಏಕಕಾಲದಲ್ಲಿ ಜರುಗಿತು.
ಮೊದಲು ಲಸಿಕೆ ತೆಗೆದುಕೊಳ್ಳಲು ಬಂದ ವ್ಯಕ್ತಿ ವಿವರ ಆನ್ ಲೈನ್ ದಾಖಲು ಮಾಡಿ, ಅದಾದ ಬಳಿಕ ಎಸ್ಎಂಎಸ್ ಮೂಲಕ ಟೈಂ ಸೆಡ್ಯೂಲ್ ಪಿಕ್ಸ್ ಮಾಡಲಾಗುತ್ತದೆ. ನಂತರ ಇಂಜಕ್ಷನ್ ಕೊಡಲಾಗುತ್ತದೆ. ಅರ್ಧಗಂಟೆ ನಿಗಾದಲ್ಲಿ ಇಡಲಾಗುತ್ತದೆ. ಅದಾದ ನಂತರ ಅಂತಿಮ ದಾಖಲೆಗಳನ್ನು ಕೇಂದ್ರ ಸರ್ಕಾರಕ್ಕೆ ರವಾನೆ ಮಾಡಲಾಗುತ್ತದೆ.
ಒಟ್ಟು 25 ಜನ ಸ್ವಯಂ ಸೇವಕರು ಒಂದೊಂದು ಕೇಂದ್ರದಲ್ಲಿ ಕೆಲಸ ಮಾಡಲಿದ್ದಾರೆ. (ದಿಗ್ವಿಜಯ ನ್ಯೂಸ್)