

ಬಳ್ಳಾರಿ/ಬೆಂಗಳೂರು: ‘ದೇವರು ಕೊಟ್ಟರೂ ಪೂಜಾರಿ ಕೊಡ’ ಎಂಬ ಮಾತು ರಾಜ್ಯದ ನ್ಯಾಯಬೆಲೆ ಅಂಗಡಿಗಳಿಗೆ ಅನ್ವಯವಾಗುತ್ತದೆ. ಏಕೆಂದರೆ, ಲಾಕ್ಡೌನ್ ವೇಳೆ ಯಾರೂ ಹಸಿವಿನಿಂದ ಬಳಲಬಾರದು. ಯಾವುದೇ ನಿರ್ಬಂಧಗಳಿಲ್ಲದೆ ಪಡಿತರ ಚೀಟಿದಾ ರರರಿಗೆ 2 ತಿಂಗಳ ಪಡಿತರವನ್ನು ವಿತರಿಸಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ. ಆದರೆ, ರಾಜ್ಯದ ಕೆಲವೆಡೆ ಪಡಿತರದಾರರಿಗೆ ದಾಖಲೆ ಕೊಡಿ, ಒಟಿಪಿ ತೋರಿಸಿ ಎಂದು ಅನಗತ್ಯವಾಗಿ ಕಿರುಕುಳ ನೀಡಲಾಗುತ್ತಿದೆ. ಜತೆಗೆ ಸೋಪು, ಎಣ್ಣೆ, ಅಗರ್ಬತ್ತಿ ಖರೀದಿಸಿ ಎಂದು ಪೀಡಿಸುತ್ತಿ ರುವುದಲ್ಲದೆ, ಹಣವನ್ನೂ ಪಡೆಯುತ್ತಿರುವ ಬಗ್ಗೆ ದೂರು ಕೇಳಿಬಂದಿವೆ. ಇದರಿಂದಾಗಿ ಕಾರ್ಡ್ದಾರರು ಕಂಗಾಲಾಗಿದ್ದಾರೆ. ಇನ್ನೊಂದೆಡೆ, ಏ.1ರಿಂದಲೇ ನಗರ ಹಾಗೂ ಗ್ರಾಮೀಣ ಪ್ರದೇಶದ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ರೇಷನ್ ವಿತರಣೆಗೆ ಸೂಚಿಸಿದ್ದರೂ ಶೆ.30 ಅಂಗಡಿಗಳು ಮುಚ್ಚಿರುವುದು ಆಹಾರ ಪದಾರ್ಥ ವಿತರಣೆಗೆ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಒಟ್ಟಾರೆ 19867 ನ್ಯಾಯಬೆಲೆ ಅಂಗಡಿಗಳಿದ್ದು, ಈವರೆಗೆ ಶೇ.36.55 ಪಡಿತರ ಹಂಚಿಕೆಯಾಗಿದೆ.
ಜಿಲ್ಲಾವಾರು ಪಡಿತರ ಹಂಚಿಕೆ: ಬಳ್ಳಾರಿ -ಶೇ.56.05, ಕೊಡಗು -51.7, ಮಂಡ್ಯ -50.87, ಉಡುಪಿ -48.07, ದಕ್ಷಿಣ ಕನ್ನಡ -47.82, ಕೋಲಾರ - 47.80, ಕೊಪ್ಪಳ - 47.78, ಗದಗ -47.12, ಬೆಂಗಳೂರು -44, ಹಾವೇರಿ -39.8, ರಾಯಚೂರು -38.47, ದಾವಣಗೆರೆ -36.64, ಚಾಮರಾಜನಗರ -36.47, ಬೆಳಗಾವಿ -35.35, ಬಾಗಲಕೋಟೆ -35.21, ಉತ್ತರ ಕನ್ನಡ -34.28, ತುಮಕೂರು -32.98, ಶಿವಮೊಗ್ಗ -31.82, ಧಾರವಾಡ -31.79, ಚಿಕ್ಕಮಗಳೂರು - 31.69, ಬೀದರ್ -29.91, ಚಿತ್ರದುರ್ಗ -29.66, ಯಾದಗಿರಿ -27.96, ಚಿಕ್ಕಬಳ್ಳಾಪುರ -27.25, ವಿಜಯಪುರ- 24.15, ಬೆಂ.ಗ್ರಾಮಾಂತರ- 23.17, ಕಲಬುರಗಿ -20.73, ಹಾಸನ -ಶೇ. 18.28.
ಕಾರ್ಡ್ದಾರರಿಗೆ ಕಿರುಕುಳ, ದಾಖಲೆ, ಹಣ ಕೇಳುವ ನ್ಯಾಯಬೆಲೆ ಅಂಗಡಿಗಳ ಪರವಾನಗಿ ರದ್ದುಪಡಿಸಲಾಗುವುದು. | ಶಾಮ್ಲಾ ಇಕ್ಬಾಲ್ ಆಹಾರ ಇಲಾಖೆ ಆಯುಕ್ತೆ ಫಲಾನುಭವಿಗಳಿಂದ ಹಣ ಕೇಳುವ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು. ಕೆಲ ಮಾಲೀಕರು ಹಣ ಕೇಳುತ್ತಿರುವ ಆರೋಪ ಇದೆ. ಅಂಥವರ ಪರವಾನಗಿ ರದ್ದುಪಡಿಸಬೇಕು | ಟಿ.ಕೃಷ್ಣಪ್ಪ ರಾಜ್ಯ ಪಡಿತರ ವಿತರಕ ಸಂಘ ಅಧ್ಯಕ್ಷ‘
ಬಳ