ಲಾಕ್​ಡೌನ್​ ವೇಳೆ ಬಲವಂತವಾಗಿ ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕುತ್ತಿದ್ದ ಅನ್ಯ ರಾಜ್ಯದ ಯುವತಿಯರ ರಕ್ಷಣೆ

Girl
Published on

ಬೆಂಗಳೂರು: ಪೊಲೀಸರ ಸಮಯ ಪ್ರಜ್ಞೆಯಿಂದಾಗಿ ಬಲವಂತವಾಗಿ ವೇಶ್ಯಾವಾಟಿಕೆ ಜಾಲಕ್ಕೆ ಸಿಲುಕುತ್ತಿದ್ದ ಅನ್ಯ ರಾಜ್ಯದ 12 ಯುವತಿಯರು ಬಚಾವ್​ ಆಗಿದ್ದಾರೆ. ಒಂದೇ ಒಂದು ಟ್ವೀಟ್​ ಮಹಿಳೆಯರ ಹಿತವನ್ನು ಕಾಪಾಡಿದೆ.

ಆರೋಪಿ ಪ್ರಜ್ವಲ್​ ಆರ್ಕೆಸ್ಟ್ರಾ ಹೆಸರಿನಲ್ಲಿ ಈ ಹಿಂದೆಯೇ ಅನ್ಯ ರಾಜ್ಯದ ಯುವತಿಯರನ್ನು ಕರೆತಂದಿದ್ದ. ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಊರಿಗೆ ಮರಳಲು ಸಾಧ್ಯವಾಗದ ಸ್ಥಿತಿಯನ್ನು ದುರುಪಯೋಗಪಡಿಸಿಕೊಂಡ ಆರೋಪಿ, ವೇಶ್ಯಾವಾಟಿಕೆಗೆ ಒತ್ತಾಯಿಸಿ, ಹಿಂಸಿಸುತ್ತಿದ್ದ.

ಈ ವಿಚಾರವನ್ನು ಯುವತಿಯೊಬ್ಬಳು ಸ್ನೇಹಿತನ ಬಳಿ ನೋವಿನಿಂದ ಹೇಳಿಕೊಂಡಿದ್ದಳು. ಆತ ಪರಿಚಿತ ವಕೀಲರಿಗೆ ಯುವತಿಯರ ವಿಷಯವನ್ನು ತಿಳಿಸಿದ್ದ. ಬಳಿಕ ವಕೀಲರು ಟ್ವೀಟ್ ಮೂಲಕ ಬೆಂಗಳೂರು ನಗರ ಪೊಲೀಸರ ಗಮನಕ್ಕೆ ತಂದಿದ್ದರು. ತಕ್ಷಣ ಕಾರ್ಯಪ್ರವೃತ್ತರಾಗಿ ಪೊಲೀಸರು ಯುವತಿಯರನ್ನು ರಕ್ಷಿಸಿದ್ದಾರೆ. ಜ್ಞಾನಭಾರತಿ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net