ಕೊರೊನಾ ಸೋಂಕು ದೃಢಪಟ್ಟಿಲ್ಲ; 34 ಮಂದಿ ಮನೆಗೆ

corona new
Published on

ಬೆಂಗಳೂರು: ಚೀನಾದ ವುಹಾನ್​ನಿಂದ ಭಾರತಕ್ಕೆ ಕರೆತರಲಾಗಿದ್ದ 650 ಜನರಿಗೆ ಕೊರೊನಾ ವೈರಸ್ ಸೋಂಕು ಇಲ್ಲ ಎಂದು ಪ್ರಯೋಗಾಲಯ ವರದಿ ನೀಡಿರುವ ಹಿನ್ನೆಲೆಯಲ್ಲಿ ಮನೆಗೆ ಕಳುಹಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

650ರಲ್ಲಿ 14 ಮಂದಿ ಕರ್ನಾಟಕದವರಾಗಿದ್ದಾರೆ. ಇವರು ನವದೆಹಲಿಯ ಆರೋಗ್ಯ ಕೇಂದ್ರದಲ್ಲಿ ನಿಗಾದಲ್ಲಿದ್ದು, ಯಾರಿಗೂ ಸೋಂಕು ತಗುಲಿಲ್ಲ ಎಂದು ದೃಢಪಟ್ಟಿದೆ. ರಾಜ್ಯಕ್ಕೆ ಬಂದ ನಂತರ ಮನೆಯಲ್ಲಿ ವಿಶ್ರಾಂತಿ ಪಡೆಯಲಿದ್ದು, ಆರೋಗ್ಯ ಕಾರ್ಯಕರ್ತರು ನಿಗಾ ವಹಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

34 ಮಂದಿ ಬಿಡುಗಡೆ: ರಾಜ್ಯದಲ್ಲಿ ಈವರೆಗೂ 171 ಶಂಕಿತರ ರಕ್ತದ ಮಾದರಿಯನ್ನು ತಪಾಸಣೆಗೆ ಕಳುಹಿಸಲಾಗಿದ್ದು, ಇವರಲ್ಲಿ 164 ಮಂದಿಯಲ್ಲಿ ಸೋಂಕು ಇಲ್ಲ ಎಂದು ವರದಿ ಬಂದಿದೆ. 7 ಮಂದಿಯ ವರದಿಗಾಗಿ ಕಾಯಲಾಗುತ್ತಿದೆ. ಆರೋಗ್ಯ ಇಲಾಖೆಯ ವಿಚಕ್ಷಣಾಧಿಕಾರಿಗಳ ನಿಗಾದಲ್ಲಿದ್ದ 34 ಮಂದಿ 28 ದಿನಗಳ ನಂತರ ಬಿಡುಗಡೆ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಎಚ್1ಎನ್1 ಸೋಂಕು: ಕೊರೊನಾ ವೈರಸ್ ಮತ್ತು ಎಚ್1ಎನ್1 ರೋಗ ಲಕ್ಷಣ ಒಂದೇ ರೀತಿ ಇದೆ. ಕೊರೊನಾ ಶಂಕಿತರ ರಕ್ತದ ಮಾದರಿಯಲ್ಲಿ ಯಾರಲ್ಲೂ ಕಾಯಿಲೆ ಲಕ್ಷಣಗಳು ಕಂಡುಬಂದಿಲ್ಲ ಎಂದು ವರದಿ ಬಂದಿದೆ. ಆದರೆ ಇವರಲ್ಲಿ ಕೆಲವರಲ್ಲಿ ಎಚ್1ಎನ್1 ದೃಢಪಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net