ಕ್ವಾರಂಟೈನ್ ಆಗಿರುವ ಬಿಹಾರಿ ಕಾರ್ಮಿಕರು ಏನೇನು ಸೌಕರ್ಯ ಕೇಳ್ತಿದಾರೆ ನೋಡಿ...!

Bihari
Published on

ಬೆಂಗಳೂರು: ಹೊಂಗಸಂದ್ರದ ಬಿಹಾರಿ ಕಾರ್ಮಿಕನಿಂದ ಈಗಾಗಲೇ 30 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಆ ಪೈಕಿ ಪ್ರಥಮ ಮತ್ತು ದ್ವಿತೀಯ ಸಂಪರ್ಕ ಹೊಂದಿದ 216 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಅವರಿಗೆ ಊಟ, ವಸತಿ ಎಲ್ಲವನ್ನೂ ಉಚಿತವಾಗಿ ಪೂರೈಸಲಾಗಿದ್ದರೂ ಅವರ ಬೇಡಿಕೆಗಳ ಪಟ್ಟಿ ದಿನೇ ದಿನೆ ಬೆಳೆಯುತ್ತಲೇ ಇದೆ. ಮಾಂಸಾಹಾರದ ಊಟ, ಬಗೆ ಬಗೆಯ ತಿಂಡಿ, ಬ್ರಾಂಡೆಡ್ ಬಟ್ಟೆಗಳು, ನೋಡಲು ಟಿ.ವಿ. ವ್ಯವಸ್ಥೆ ಮಾಡುವಂತೆ ಅವರು ಬೇಡಿಕೆ ಇಡುತ್ತಿದ್ದಾರೆ.

ಇನ್ನು ಕೆಲವರು ಗುಟ್ಕಾ, ಸಿಗರೇಟ್ ಹಾಗೂ ಬಿರಿಯಾನಿ ಕೊಡುವಂತೆ ಹಠ ಮಾಡುತ್ತಿದ್ದಾರೆ. ಅವರನ್ನು ನಿಯಂತ್ರಿಸುವುದೇ ದೊಡ್ಡ ಸವಾಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಇದಲ್ಲದೆ ಕೆಲವು ಬಿಹಾರಿಗಳು ತಮಗೆ ಪ್ರತಿದಿನ ಸೇವೆ ನೀಡುವ ಕರೊನಾ ವಾರಿಯರ್ಸ್‌ಗಳ ಮೇಲೆಯೇ ಪುಂಡಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net