ಕರೊನಾ ಸೇನಾನಿಗಳಿಗೆ ಸತ್ಕಾರ

010101
Published on

ತೆಲಸಂಗ: ಗ್ರಾಮದಲ್ಲಿ ಶನಿವಾರ ಪಂಡಿತ ಪುಟ್ಟರಾಜ ಕವಿ ಪಂಚಾಕ್ಷರಿ ಗವಾಯಿಗಳ ಕಲಾ ಸಂಘ ಮತ್ತು ವಿಶ್ವಚೇತನ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ಕರೊನಾ ಸೇನಾನಿಗಳನ್ನು ಸತ್ಕರಿಸಲಾಯಿತು.

ಹಿರೇಮಠದ ವೀರೇಶ್ವರ ದೇವರು ಮಾತನಾಡಿ, ಮಹಾಮಾರಿ ಕರೊನಾ ವೈರಸ್ ನಿಯಂತ್ರಿಸಲು ಹಗಲಿರುವ ಶ್ರಮಿಸುತ್ತಿರುವ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಆಶಾ ಮತ್ತು ಅಂಗನವಾಡಿ ಕಾರ್ಯರ್ತೆಯರನ್ನು ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಡಾ.ಎಸ್.ಐ. ಇಂಚಗೇರಿ, ಡಾ.ಬಿ.ಎಸ್. ಕಾಮನ್, ಅಮೋಘ ಖೊಬ್ರಿ ಮಾತನಾಡಿದರು. ಅಥಣಿ ತಾಪಂ ಇಒ ರವಿ ಬಂಗಾರೆಪ್ಪನವರ, ತಾಲೂಕು ಪಂಚಾಯಿತಿ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ, ಐ.ಎನ್. ಇಂಚಗೇರಿ, ಪಿಎಸ್‌ಐ ಕೆ.ಸ್. ಕೊಚರಿ, ಹೆಸ್ಕಾಂ ಎಇಇ ಎನ್.ಜಿ. ಬೀಳಗಿಕರ, ಡಾ.ವಾಸಂತಿ, ಗ್ರಾಮಲೆಕ್ಕಾಧಿಕಾರಿ ಬಿ.ಜಿ. ಇರಕರ್, ಪಿಡಿಒ ಬೀರಪ್ಪ ಕಡಗಂಚಿ, ಪ್ರಕಾಶ ಸಿಂದಗಿ, ಅಶೋಕ ಪರುಶೆಟ್ಟಿ, ಮಾದೇವ ಸಕ್ರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net