

ಹೆಬ್ರಿ: ನಾವು ಭಾರತೀಯ ಸಂಸ್ಕೃತಿ ಉಳಿಸಿಕೊಳ್ಳಲು, ಪಠ್ಯದಲ್ಲಿ ದೇಶಕ್ಕಾಗಿ ಹೋರಾಟ ಮಾಡಿದವರ ವಿಚಾರವನ್ನು ಅಧ್ಯಯನ ಮಾಡಬೇಕು. ಅದರೊಂದಿಗೆ ಸಾತ್ವಿಕ ಹೋರಾಟ ಮಾಡಿ ಒಗ್ಗಟ್ಟಾಗಿ ಇರಬೇಕು ಎಂದು ಅಮೃತ ಭಾರತಿ ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ ಹೇಳಿದರು.
ಹೆಬ್ರಿ ಪಿಆರ್‌ಎನ್ ಅಮೃತಭಾರತಿ ವಿದ್ಯಾಲಯದಲ್ಲಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ದಿನಾಚರಣೆಯಲ್ಲಿ ಬುಧವಾರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಸಂಸ್ಥೆ ಆಂಗ್ಲ ಭಾಷಾ ಶಿಕ್ಷಕಿ ಸಾವಿತ್ರಿ ಕಿಣಿ ಮಾತನಾಡಿ, ಭಾರತವನ್ನು ಒಗ್ಗೂಡಿಸುವ ಕೆಲಸ ಛತ್ರಪತಿ ಶಿವಾಜಿ ಮಹಾರಾಜರ ಮೂಲಕ ಆಗಿದೆ. ಶಿವಾಜಿ ಹಿಂದು ಸಾಮ್ರಾಜ್ಯವನ್ನು ಮರುಪ್ರತಿಷ್ಠಾಪಿಸಿದ ಮಹಾನ್ ಶಕ್ತಿ. ಭಾರತವನ್ನು ಅಲ್ಪ ಸಮಯದಲ್ಲಿ ಸಂಸ್ಕೃತಿ ಮತ್ತು ಪರಂಪರೆಯನ್ನು ತನ್ನ ಜೀವಿತಾವಧಿಯಲ್ಲಿ ಉಳಿಸಿದ ಹೋರಾಟಗಾರಾಗಿದ್ದರು ಎಂದರು. ಮುಖ್ಯಸ್ಥೆ ಅಪರ್ಣಾ ಆಚಾರ್ ಹಾಗೂ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.