ಶ್ರೀ ರಾಘವೇಂದ್ರ ಸ್ವಾಮಿಗಳ ಪಟ್ಟಾಭಿಷೇಕ ಮಹೋತ್ಸವ

RAGHAVENDRA SWAMI download
Published on

ಹುಬ್ಬಳ್ಳಿ : ಇಲ್ಲಿನ ಭವಾನಿನಗರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರಸ್ವಾಮೀಜಿ ಮಠದಲ್ಲಿ ಮಾ. 1 ರಿಂದ 6 ರವರೆಗೆ ಶ್ರೀ ರಾಘವೇಂದ್ರಸ್ವಾಮಿಗಳವರ 404ನೇ ಪಟ್ಟಾಭಿಷೇಕ ಮಹೋತ್ಸವ ಹಾಗೂ 430ನೇ ವರ್ಧಂತಿ ಮಹೋತ್ಸವ ಆಚರಣೆ ಆಯೋಜಿಸಲಾಗಿದೆ.

ನಿತ್ಯ ಬೆಳಗ್ಗೆ 9 ಗಂಟೆಗೆ ಹೋಮ, ಸಂಜೆ 5.15ಕ್ಕೆ ದೀವಟಿಗೆ ಸೇವೆ, 5.30ಕ್ಕೆ ದೀಪಾರಾಧನೆ, ಅಪ್ಟಾವಧಾನ ಸೇವೆ, 6.30 ರಿಂದ 7.30ವರೆಗೆ "ಶ್ರೀ ಗುರುರಾಯರ ವೈಭವ" ಪ್ರವಚನವು ಉಡುಪಿಯ ವಿದ್ವಾನ್​ ಆಯನೂರು ಶ್ರೀ ಮಧುಸೂಧನ ಆಚಾರ್ಯ ಅವರಿಂದ ನಡೆಯಲಿದೆ.

ರಾತ್ರಿ 7.30ಕ್ಕೆ ಸಾಂಸತಿಕ ಕಾರ್ಯಕ್ರಮಗಳು ನಡೆಯಲಿವೆ. 6 ರಂದು ಸಂಜೆ 6 ಗಂಟೆಗೆ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಭಕ್ತರು ಪಾಲ್ಗೊಳ್ಳುವಂತೆ ಶ್ರೀ ಮಠದ ವಿಚಾರಣಾಕರ್ತರಾದ ಎ.ಸಿ. ಗೋಪಾಲ ಹಾಗೂ ವ್ಯವಸ್ಥಾಪಕರಾದ ಜೆ. ವೇಣುಗೋಪಾಲ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net