ಸಕ್ಕರೆನಾಡಲ್ಲಿ ಕಡಿಮೆಯಾಗ್ತಿದೆ ಕರೊನಾ ಅಬ್ಬರ...!

carona logo
Published on

ಮಂಡ್ಯ: ದಿನದಿಂದ ದಿನಕ್ಕೆ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಭಾನುವಾರದ ಅಂತ್ಯಕ್ಕೆ 885 ಸಕ್ರಿಯ ಪ್ರಕರಣಗಳಿವೆ.
ಮಂಡ್ಯ ತಾಲೂಕಿನಲ್ಲಿ 319, ಮದ್ದೂರಿನಲ್ಲಿ 95, ಮಳವಳ್ಳಿಯಲ್ಲಿ 68, ಪಾಂಡವಪುರದಲ್ಲಿ 113, ಶ್ರೀರಂಗಪಟ್ಟಣದಲ್ಲಿ 105, ಕೆ.ಆರ್.ಪೇಟೆಯಲ್ಲಿ 95, ನಾಗಮಂಗಲ ತಾಲೂಕಿನಲ್ಲಿ 80 ಹಾಗೂ ಹೊರ ಜಿಲ್ಲೆಯ 10 ಪ್ರಕರಣಗಳು ಸಕ್ರಿಯವಾಗಿವೆ. ಇನ್ನು ಚಿಕಿತ್ಸೆ ಬಳಿಕ 39 ಜನರು ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅಂತೆಯೆ 39 ಪ್ರಕರಣ ಹೊಸದಾಗಿ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ 16706 ಜನ ಸೋಂಕಿತರಿದ್ದಾರೆ. ಈ ಪೈಕಿ 15679 ಸೋಂಕಿತರು ಚೇತರಿಸಿಕೊಂಡಿದ್ದಾರೆ. 232 ಜನರು ಸರ್ಕಾರಿ ಆಸ್ಪತ್ರೆಯಲ್ಲಿ, 75 ಜನರು ಖಾಸಗಿ ಆಸ್ಪತ್ರೆಯಲ್ಲಿ, 196 ಜನರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಹಾಗೂ 382 ಜನರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಟಿ.ಎನ್.ಧನಂಜಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net