ಕರೊನಾ ಸೇನಾನಿಗಳಿಗೆ ಪ್ರೋತ್ಸಾಹ ಧನ ಕೊಡಿ: ಕಂಪ್ಲಿಯಲ್ಲಿ ಉಪತಹಸೀಲ್ದಾರ್‌ಗೆ ಸಿಐಟಿಯು ತಾಲೂಕು ಸಮಿತಿ ಮನವಿ

140520 Kampli CITU Appeal for Incentives
Published on

ಕಂಪ್ಲಿ: ಕರೊನಾ ಸೇನಾನಿಗಳಿಗೆ 25 ಸಾವಿರ ರೂ. ಪ್ರೋತ್ಸಾಹಧನ ಹಾಗೂ 50 ಲಕ್ಷ ರೂ. ವಿಮೆ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಸಿಐಟಿಯು ತಾಲೂಕು ಸಮಿತಿ ಗುರುವಾರ ಉಪತಹಸೀಲ್ದಾರ್ ಬಿ.ರವೀಂದ್ರ ಕುಮಾರ್ ಮೂಲಕ ಸಿಎಂಗೆ ಮನವಿ ಸಲ್ಲಿಸಿತು.

ತಾಲೂಕು ಸಂಚಾಲಕ ಬಂಡಿ ಬಸವರಾಜ್ ಮಾತನಾಡಿ, ಆಶಾ, ಅಂಗವಾಡಿ ಕಾರ್ಯಕರ್ತೆಯರು, ಗ್ರಾಪಂ ನೌಕರರು, ಪೌರ ಕಾರ್ಮಿಕರು, ಆರೋಗ್ಯ ಸಹಾಯಕರು, ಶುಶ್ರೂಷಕಿಯರು, ವೈದ್ಯರು, 108 ಆಂಬುಲೆನ್ಸ್ ನೌಕರರು ಜೀವ ಪಣಕ್ಕಿಟ್ಟು ಕರೊನಾ ನಿಯಂತ್ರಣ ಕಾರ್ಯದಲ್ಲಿ ತೊಡಗಿದ್ದಾರೆ. ಕಂಟೇನ್ಮೆಂಟ್, ಕೆಂಪು ವಲಯಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಪಿಪಿಇ ಕಿಟ್ ವಿತರಿಸಬೇಕು. ಕರೊನಾ ಸೋಂಕಿತ ಸಿಬ್ಬಂದಿಗೆ 5ಲಕ್ಷ ರೂ. ಪರಿಹಾರ ನೀಡಬೇಕು. ಸೇನಾನಿಗಳಿಗೆ ಉಚಿತ ಪಡಿತರ ವಿತರಿಸಬೇಕು. ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಕುಟುಂಬಗಳಿಗೆ ಮಾಸಿಕ 7,500 ರೂ. ನೀಡುವುದು ಸೇರಿ ವಿವಿಧ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಸಿಐಟಿಯು ತಾಲೂಕು ಸಹ ಸಂಚಾಲಕರಾದ ರಾಜಭಕ್ಷಿ, ನಾಗರಾಜ, ಹೊನ್ನೂರಸಾಬ್, ಅಂಗನವಾಡಿ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಎಚ್.ಮಂಜುಳಾ, ಪದಾಧಿಕಾರಿಗಳಾದ ಬಿ.ಕೆ.ಉಮಾದೇವಿ, ತಿಪ್ಪಮ್ಮ, ನಾಜೀರಾ, ಶಂಕ್ರಮ್ಮ, ಅಕ್ಷರ ದಾಸೋಹ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಖುರ್ಷಿದ್ ಬೇಗಂ, ಪದಾಧಿಕಾರಿಗಳಾದ ಲಕ್ಷ್ಮೀದೇವಿ, ಸುಜಾತಾ, ತ್ರಿವೇಣಿ, ಕಮಲಾದೇವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net