ವಿಧಿಸಿದ ದಂಡ ತಾನೇ ಕಟ್ಟಿದ ಕರೊನಾ ಸೇನಾನಿ

dhanda new
Published on

ಕಡಬ: ಮಾಸ್ಕ್ ಧರಿಸಿಲ್ಲವೆಂದು ಕಡಬದಲ್ಲಿ ಕೂಲಿ ಕಾರ್ಮಿಕನಿಗೆ ದಂಡ ವಿಧಿಸಿದ ಕಡಬ ಪಟ್ಟಣ ಪಂಚಾಯಿತಿಯ ಕರೊನಾ ಸೇನಾನಿ ಅಧಿಕಾರಿ ಕೊನೆಗೆ ತಾನೇ ದಂಡ ಕಟ್ಟಬೇಕಾದ ಪ್ರಸಂಗ ಎದುರಾಯಿತು.

ಬುಧವಾರ ಕೂಲಿ ಕೆಲಸಕ್ಕೆ ತೆರಳಿ ಹಿಂತಿರುಗಿದ್ದ ದಂಪತಿ ಕಡಬ ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಮಾಸ್ಕ್ ಧರಿಸಿಲ್ಲವೆಂದು ಕಡಬ ಪಟ್ಟಣ ಪಂಚಾಯಿತಿಯ ಕರೊನಾ ಸೇನಾನಿ ಅಧಿಕಾರಿಯೋರ್ವರು 100 ರೂ. ದಂಡ ವಿಧಿಸಿ ರಶೀದಿ ನೀಡಿದರು. ಈ ವೇಳೆ ಹಣವಿಲ್ಲವೆಂದು ಪರಿ ಪರಿಯಾಗಿ ಬೇಡಿಕೊಂಡ ಕೂಲಿ ಕಾರ್ಮಿಕ ಕೊನೆಗೆ ತನ್ನ ಕೈಯಲ್ಲಿದ್ದ 10 ರೂ.ವನ್ನು ಅಧಿಕಾರಿಯ ಕೈಗಿತ್ತಿದ್ದಾರೆ. 100 ರೂ. ರಶೀದಿ ಬರೆದಿದ್ದ ಅಧಿಕಾರಿ ಬೇರೆ ದಾರಿ ಕಾಣದೆ ತನ್ನ ಕೈಯಿಂದ 90 ರೂ. ಸೇರಿಸಿ ಸರ್ಕಾರಕ್ಕೆ ಸಲ್ಲಿಸಬೇಕಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net