

ಬೈಲಹೊಂಗಲ: ಪಟ್ಟಣದ ಎಸ್‌ಜಿವಿ ಆಯುರ್ವೇದ ಮಹಾವಿದ್ಯಾಲಯದಲ್ಲಿ 10 ದಿನ ಸೇವೆ ಸಲ್ಲಿಸಿದ ವೈದ್ಯರನ್ನು ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ, ಪುರಸಭೆ ಸದಸ್ಯೆ ವಾಣಿ ವಿಜಯ ಪತ್ತಾರ ಹಾಗೂ ವಿದ್ಯಾನಗರದ ನಾಗರಿಕರು ಶುಕ್ರವಾರ ಸತ್ಕರಿಸಿ ಬರಮಾಡಿಕೊಂಡರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿ, ಜೀವದ ಹಂಗು ತೊರೆದು ಜನರ ಜೀವ ಉಳಿಸುತ್ತಿರುವ ವೈದ್ಯರ ಸೇವೆ ಅನನ್ಯವಾಗಿದ್ದು, ವೈದ್ಯರ ಸಲಹೆಯಂತೆ ರೋಗವನ್ನು ಹಿಮ್ಮೆಟ್ಟಿಸಲು ಎಲ್ಲರೂ ಮಾಸ್ಕ್ ಬಳಸಿ ದೈಹಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದರು. ಸಾರ್ವಜನಿಕ ಆಸ್ಪತ್ರೆ ವೈದ್ಯೆ ಡಾ.ಅನಸೂಯಾ ಮೂಲಿಮನಿ, ಡಾ.ದೀಪಾ ಕುಕನೂರ, ಮಹಾಂತೇಶ ರಾವಚನಹುತನವರ ಅವರನ್ನು ಸನ್ಮಾನಿಸಲಾಯಿತು. ವಕೀಲ ವಿಜಯ ಪತ್ತಾರ, ಐ.ಎಲ್.ಪಾಟೀಲ, ರುದ್ರಪ್ಪ ಮೆಟಗುಡ್ಡ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಬಸವರಾಜ ನೇಸರಗಿ, ಡಿ.ಎನ್. ಸಾಲಿಮಠ, ಬಸವರಾಜ ಗದಗ, ನಿಂಗಪ್ಪ ಬೂದಿಹಾಳ, ಎಸ್.ಎಂ .ಪಾಟೀಲ, ಮಲ್ಲೇಶಪ್ಪ ಕುಂಕೂರ, ಶಿವಪ್ರಸಾದ ಪಾಟೀಲ ಇತರರು ಇದ್ದರು.