ಕರೊನಾ ಸೇನಾನಿಗಳ ಸೇವೆ ಶ್ಲಾಘನೀಯ

12Huk1-Web
ಕೃಷಿ ವಿಜ್ಞಾನ ಪದವಿ ಅಧ್ಯಯನ ಮಾಡುತ್ತಿರುವ ತಾಲೂಕಿನ ಎಲಿಮುನ್ನೋಳಿ ಗ್ರಾಮದ ಅರುಣ ಗಿರಿಗೌಡನವರ ಅವರಿಗೆ ಕೆಎಂಎಫ್‌ನಿಂದ 10 ಸಾವಿರ ರೂ. ಚೆಕ್ ನೀಡಲಾಯಿತು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ರಾಯಪ್ಪ ಡೂಗ, ಡಾ.ಜಯಪ್ರಕಾಶ ಮನ್ನೇರಿ, ರಾಘವೇಂದ್ರ ನೂಲಿ ಇದ್ದರು.
Published on

ಹುಕ್ಕೇರಿ: ಕರೊನಾ ನಿಯಂತ್ರಣದಲ್ಲಿ ತೊಡಗಿಸಿಕೊಂಡ ಆಶಾ ಕಾರ್ಯಕರ್ತೆಯರ ಸೇವೆ ಶ್ಲಾಘನೀಯ. ಅವರಿಗೆ ಥರ್ಮಲ್ ಸ್ಕ್ರೀನಿಂಗ್ ಮತ್ತು ಆಕ್ಸೋ ಮೀಟರ್ ನೀಡಿದ್ದರೆ ಮತ್ತಷ್ಟು ಗುಣಮಟ್ಟದ ಸೇವೆ ನೀಡಲು ಅನುಕೂಲವಾಗಲಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಹೇಳಿದ್ದಾರೆ.

ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಕೆಎಂಎಫ್ ಆಶ್ರಯ ದಲ್ಲಿ ಹಮ್ಮಿಕೊಳ್ಳಲಾಗಿದ್ದ ಆಶಾ ಕಾರ್ಯಕರ್ತೆಯರಿಗೆ ಗೌರವ ಧನದ ಚೆಕ್ ವಿತರಣಾ ಸಮಾರಂಭದಲ್ಲಿ ಮಾತನಾಡಿ, ಜ್ವರ ಮತ್ತಿತರ ರೋಗಗಳ ತಪಾಸಿಸಲು ವೈದ್ಯರು ಹೆದರುತ್ತಿರುವುದು ಶೋಚನೀಯವಾಗಿದೆ. ಜನತೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವಂತಹ ಆಹಾರ ಸೇವಿಸಬೇಕೆಂದರು.

ಕೆಎಂಎಫ್ ಉಪವ್ಯವಸ್ಥಾಪಕ ಮಹೇಶ ಲಕ್ಕಣ್ಣವರ ಮಾತ ನಾಡಿ, ಬೆಳಗಾವಿ ಹಾಲು ಒಕ್ಕೂಟದಿಂದ ಜಿಲ್ಲೆಯಲ್ಲಿ ಆಶಾ ಕಾರ್ಯ ಕರ್ತೆಯರಿಗೆ ಅಂದಾಜು 25 ಲಕ್ಷ ರೂ. ಗೌರವ ನೀಡಲಾಗುತ್ತಿದೆ ಎಂದರು. ತಾಲೂಕಿನ 62 ಕಾರ್ಯಕರ್ತೆಯರಿಗೆ ತಲಾ 3 ಸಾವಿರ ರೂ.ಗಳಂತೆ ಪ್ರೋತ್ಸಾಹ ಧನ ಚೆಕ್ ನೀಡಿದರು. ಕೃಷಿ ವಿಜ್ಞಾನ ಪದವಿ ಅಧ್ಯಯನ ಮಾಡುತ್ತಿರುವ ತಾಲೂಕಿನ ಎಲಿಮುನ್ನೋಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರ ಮಗ ಅರುಣ ಗಿರಿಗೌಡನವರ ಅವರ ಶೈಕ್ಷಣಿಕ ಉತ್ತೇಜನಕ್ಕೆ ಕೆಎಂಎಫ್‌ನಿಂದ 10 ಸಾವಿರ ರೂ. ಚೆಕ್ ಸಹಾಯಧನ ನೀಡಿದರು. ಕೆಎಂಎಫ್ ಜಿಲ್ಲಾ ನಿರ್ದೇಶಕ ರಾಯಪ್ಪ ಡೂಗ ಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪಕ ಡಾ. ಜಯಪ್ರಕಾಶ ಮನ್ನೇರಿ, ಸಹಕಾರ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ನೂಲಿ, ಅಪ್ಪಣ್ಣ ಬಡಿಗೇರ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net