

ಬೈಲಹೊಂಗಲ: ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹನೀಯರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಎಸಿ ಶಿವಾನಂದ ಭಜಂತ್ರಿ ಹೇಳಿದ್ದಾರೆ. ಪಟ್ಟಣದ ಪುರಸಭೆಯ ಶೂರ ಸಂಗೊಳ್ಳಿ ರಾಯಣ್ಣ ಮೈದಾನದಲ್ಲಿ ತಾಲೂಕಾಡಳಿತದಿಂದ ನಡೆದ ಸ್ವಾತಂತ್ರೃ ದಿನಾಚರಣೆಯಲ್ಲಿ ಮಾತನಾಡಿದರು. ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಸ್ವಾತಂತ್ರ್ಯ ಯೋಧರಾದ ಕಿತ್ತೂರ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಮಟೂರ ಬಾಳಪ್ಪ, ಬೆಳವಡಿ ಮಲ್ಲಮ್ಮ ಹಾಗೂ ಇನ್ನಿತರ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ್ದು ಸ್ಮರಣೀಯ ಎಂದರು. ಪ್ರದೀಪ ಗುಂಟಿ, ಉಳವಪ್ಪ ಸಾತೇನಹಳ್ಳಿ, ಪಾರ್ವತಿ ನರೇಂದ್ರ, ಡಾ.ಗುರುನಾಥ ಹೂಗಾರ, ಕೆ.ಐ.ನಾಗನೂರ, ಡಾ.ಸಂಜಯ ಸಿದ್ದಣ್ಣವರ, ಡಾ.ದೊಡ್ಡಪ್ಪ ಹೂಗಾರ ಇದ್ದರು.
ಖಾನಾಪುರ ವರದಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶನಿವಾರ ಸ್ವಾತಂತ್ರ ದಿನ ಆಚರಿಸಲಾಯಿತು. ಪಾರಿಶ್ವಾಡ ಗ್ರಾಮದ ಹನಿವೆಲ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಸುಭಾಸ ಗುಳಶೆಟ್ಟಿ ಧ್ವಜಾರೋಹಣ ನೆರವೇರಿಸಿದರು. ಪ್ರಾಂಶುಪಾಲ ಡಾ.ಅನಿಲಕುಮಾರ ಬೆಣಗಿ, ಕವಿತಾ ಅಂಗಡಿ, ಸೋಮಶೇಖರ ಗುಳಶೆಟ್ಟಿ ಇದ್ದರು. ಪಟ್ಟಣದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಸಹಾಯಕ ಕೃಷಿ ನಿರ್ದೇಶಕ ಡಿ.ಬಿ.ಚೌವಾಣ ಧ್ವಜಾರೋಹಣ ನೆರವೇರಿಸಿದರು. ಸಿಬ್ಬಂದಿ ಇತರರು ಇದ್ದರು.