ಡೊಂಬರಕೊಪ್ಪ ಗ್ರಾಮಸ್ಥರಿಂದ ರಸ್ತೆ ಬಂದ್

01
Published on

ಚನ್ನಮ್ಮ ಕಿತ್ತೂರು: ಸಮೀಪದ ಡೊಂಬರಕೊಪ್ಪ ಗ್ರಾಮಸ್ಥರು ಕರೊನಾ ಸೋಂಕು ಭೀತಿಯಿಂದ ಬೇರೆ ಊರುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿದ್ದಾರೆ.

ಡೊಂಬರಕೊಪ್ಪ ಗ್ರಾಮದ ಕಿತ್ತೂರು ಹಾಗೂ ನಿಚ್ಚಣಕಿ ಸೇರುವ ಮಾರ್ಗದಲ್ಲಿದೆ. ಗ್ರಾಮದ ಒಳರಸ್ತೆಗಳನ್ನು ಬಂದ್ ಮಾಡಿ ಹೊರಗಿನವರ ಪ್ರವೇಶ ತಡೆಯಲಾಗಿದೆ. ಗ್ರಾಮದ ಯುವಕರು ಬೇರೆ ಊರುಗಳಿಂದ ಜನರು ಬಂದರೆ ಅವರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಮಾಡಿದ ಬಳಿಕ ಪ್ರವೇಶಕ್ಕೆ ಅವಕಾಶ ನೀಡುತ್ತಿದ್ದಾರೆ. ಅಲ್ಲದೆ ಗ್ರಾಮಸ್ಥರಿಗೆ ದಿನಬಳಕೆ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಲಾಗಿದೆ.

ಜನರು ನಿಗದಿಪಡಿಸಿದ ಸಮಯದಲ್ಲೇ ಸಾಮಾಜಿ ಅಂತರ ಕಾಯ್ದುಕೊಂಡು ವಸ್ತುಗಳನ್ನು ಖರೀದಿಸಬೇಕೆಂದು ಸಾರ್ವಜನಿಕರಿಗೆ ಸೂಚಿಸಲಾಗಿದೆ ಎಂದು ಗ್ರಾಮದ ಮುಖಂಡರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net