ಕರೊನಾ ವೈರಸ್ ತಡೆಗೆ ನಡುಗೇರೆ ದುರಗಮ್ಮ ದೇವಿಯ ಮೊರೆ ಹೋದ ಭಕ್ತರು

180320 Kotturu Durugamma Devi Spl Pooja Aganist Covid 19
Published on

ಕೊಟ್ಟೂರು: ಕೊರೊನಾ ವೈರಸ್ ಭೀತಿ ಹಿನ್ನೆಲೆ ಪಟ್ಟಣದ ಜನರು ಬುಧವಾರ ನಡುಗೇರೆ ದುರಗಮ್ಮ ದೇವಿಯ ಮೊರೆಹೋದರು. ವೈರಸ್‌ನಿಂದ ಕಾಪಾಡುವಂತೆ ನೂರಾರು ಭಕ್ತರು ಆಲಯದಿಂದ ಮೆರವಣಿಗೆ ಮೂಲಕ ದೇವಿಯ ಕೇಲ್‌ನ್ನು ಆಂಜನೇಯ ದೇವಾಲಯದ ಆವರಣಕ್ಕೆ ಕರೆತಂದು ಗಂಗೆಪೂಜೆ ನೆರವೇರಿಸಿ ಭಕ್ತರಿಗೆ ಕಂಕಣಕಟ್ಟಿದರು. ಬಾವಿ ಮುಂಭಾಗ ಕಂಬಳಿ ಹಾಸಿ, ಮಣ್ಣಿನ ಕುಂಬಗಳ ಎರಡು ಕೇಲ್‌ಗಳನ್ನಿಟ್ಟು ವೈರಸ್ ಹರಡಂತೆ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಬಳಿಕ ಮಂಗಳವಾದ್ಯಗಳೊಂದಿಗೆ ದೇವಿ ಕೇಲ್‌ನ್ನು ಆಲಯಕ್ಕೆ ಕರೆತಂದು ಪ್ರತಿಷ್ಠಾಪಿಸಲಾಗಿತು.

ಮುಖಂಡರಾದ ಹನುಮಂತಪ್ಪ, ತೋಟದ ಅಂಜಿನಪ್ಪ, ಸಿಟಿ ಕೆಂಚಪ್ಪ, ದೀಪ ಹೋಟಲ್ ಪ್ರಕಾಶ, ಎಚ್. ಅಂಜಿನಪ್ಪ, ಬೆಣ್ಣಿಹಳ್ಳಿ ಅಂಜಿನಪ್ಪ, ಗೋಣೆಪ್ಪ, ಪಪಂ ಸದಸ್ಯ ಟಿ.ರಾಮಣ್ಣ, ಕುರುಬರ ನುಪ್ಪಜ್ಜ, ಕೊಟ್ರೇಶ, ಟಿ.ನಾಗರಾಜ್, ತಾಯಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net