ಕರೊನಾ ವೈರಸ್ ಸೋಂಕು: ಮಾಲ್, ಚಿತ್ರಮಂದಿರ ಭಣಭಣ

mall mar 20
Published on

ಬೆಂಗಳೂರು: ಕರೊನಾ ವೈರಸ್ ಸೋಂಕು ತಗಲುವ ಭೀತಿಯಿಂದ ಜನರು ಮನೆಗಳಿಂದ ಹೊರಬರಲು ಹೆದರುತ್ತಿದ್ದಾರೆ. ಸದಾ ಜನರಿಂದ ಗಿಜಿಗಿಡುತ್ತಿದ್ದ ಶಾಪಿಂಗ್ ಮಾಲ್, ಹೋಟೆಲ್ ಮತ್ತು ಸಿನಿಮಾ ಥಿಯೇಟರ್​ಗಳೆಲ್ಲ ಖಾಲಿ ಹೊಡೆಯುತ್ತಿವೆ.

ಏರ್​ಲೈನ್ಸ್, ಕೈಗಾರಿಕೆ, ಹೋಟೆಲ್ ಸೇರಿ ಬಹಳಷ್ಟು ವಾಣಿಜ್ಯ ಸಂಸ್ಥೆಗಳ ವ್ಯಾಪಾರ ವಹಿವಾಟು ಕ್ಷೀಣಿಸಿದೆ. ಪ್ರತಿದಿನ ಸಾವಿರಾರು ಕೋಟಿ ರೂ. ನಷ್ಟವಾಗುತ್ತಿದೆ. ಲಕ್ಷಾಂತರ ಉದ್ಯೋಗಸ್ಥರ ಜೀವನ ನಿರ್ವಹಣೆಗೆ ತೊಡಕು ಉಂಟಾಗಿದೆ.

ಪ್ರವಾಸಿ ತಾಣದಲ್ಲೂ ಜನರಿಲ್ಲ: ಪ್ರವಾಸಿತಾಣಗಳಿಗೂ ಕರೊನಾ ವೈರಸ್​ನ ಬಿಸಿ ತಟ್ಟಿದೆ. ಪ್ರವಾಸಕ್ಕಾಗಿ ಮಾಡಿದ್ದ ಬುಕ್ಕಿಂಗ್ ಅನ್ನು ಜನರು ರದ್ದುಪಡಿಸುತ್ತಿದ್ದಾರೆ. ಹೀಗಾಗಿ ಪ್ರವಾಸಿ ತಾಣಗಳು ಬಿಕೋ ಎನ್ನುತ್ತಿವೆ. ಜನರಿಂದ ಗಿಜಿಗುಡುತ್ತಿದ್ದ ಶಾಪಿಂಗ್ ಮಾಲ್, ಚಿತ್ರಮಂದಿರಗಳು ಜನರಿಲ್ಲದೆ ಭಣಗುಡುತ್ತಿವೆ. ಮಲ್ಟಿಪ್ಲೆಕ್ಸ್​ಗಳಲ್ಲಿ ಸಿನಿಮಾ ನೋಡುವವರ ಸಂಖ್ಯೆ ಶೇ.20

ಹಾಗೂ ಏಕಪರದೆ ಚಿತ್ರಮಂದಿರಗಳಲ್ಲಿ ವೀಕ್ಷಕರ ಸಂಖ್ಯೆ ಶೇ.5 ಇಳಿದಿದೆ. ಚಿಕನ್-ಮಟನ್ ಖರೀದಿಸುವವರ ಸಂಖ್ಯೆ ಶೇ.50 ಕ್ಷೀಣಿಸಿದೆ. ಜನಸಂದಣಿ ಹೆಚ್ಚಿರುವ

ಕಡೆ ಓಡಾಡುವುದರಿಂದ ಕರೊನಾ ಸೋಂಕು ತಗುಲಬಹುದು ಎಂಬ ಆತಂಕದಲ್ಲಿ ಅಂಥ ಪ್ರದೇಶಗಳಿಗೆ ಹೋಗಲು ಜನರು ಹಿಂದೇಟು ಹಾಕುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net