ಬೆಂಗಳೂರು ನಗರದಲ್ಲಿ 89 ಕರೊನಾ ಸೋಂಕಿತರು: ಗುಣಮುಖರಾದವರು 40 ಮಂದಿ

Coronavirus 12 Feb 20
Published on

ಬೆಂಗಳೂರು: ಬೆಂಗಳೂರು ವ್ಯಾಪ್ತಿಯಲ್ಲಿ ಏ.18ರವರೆಗೆ ಒಟ್ಟು 89 ಕರೊನಾ ಸೋಂಕಿತ ಪ್ರಕರಣಗಳು ದೃಢಪಟ್ಟಿದ್ದು, ಒಟ್ಟು 40 ಜನರು ಗುಣಮುಖರಾಗಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ 80, ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 3, ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುವವ ಹೊರ ರಾಜ್ಯದ 4 ಹಾಗೂ ಒಬ್ಬ ವ್ಯಕ್ತಿ ಯಾವ ಪ್ರದೇಶ ಎನ್ನುವುದನ್ನು ಪತ್ತೆಹಚ್ಚಲಾಗುತ್ತಿದೆ ಎಂಬ ಮಾಹಿತಿ ಶನಿವಾರ ಬಿಬಿಎಂಪಿ ಬುಲೆಟಿನ್​ನಿಂದ ತಿಳಿದುಬಂದಿದೆ. ನಗರದ 31 ಜ್ಚರ ತಪಾಸಣಾ ಕೇಂದ್ರಗಳಿಂದ ಈವರೆಗೆ 4,240 ಜನರ ತಪಾಸಣೆ ಮಾಡಲಾಗಿದ್ದು, 61 ಪ್ರಕರಣಗಳನ್ನು ಹೆಚ್ಚಿನ ಚಿಕಿತ್ಸೆಗೆ ಹಾಗೂ 16 ಜನರ ಗಂಟಲು ದ್ರವ ಪರೀಕ್ಷೆಗೆ ಕಳಿಸಲಾಗಿದೆ. ಆದರೆ ಜ್ವರ ತಪಾಸಣಾ ಕೇಂದ್ರದಲ್ಲಿ ಪರೀಕ್ಷೆಗೆ ಒಳಗಾದವರಲ್ಲಿ ಯಾರಿಗೂ ಸೋಂಕು ದೃಢಪಟ್ಟಿಲ್ಲ.

ನೋಡಲ್ ಅಧಿಕಾರಿ ನೇಮಕ: ಸರ್ಕಾರದ 18 ಇಲಾಖೆ ಹಾಗೂ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧಿಕಾರಿ, ನೌಕರರು ಏ.20ರಿಂದ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ. ಪ್ರತಿ ಇಲಾಖೆಗೆ ಒಬ್ಬರನ್ನು ನೋಡಲ್ ಅಧಿಕಾರಿ ನೇಮಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net