ಕರೊನಾ ವೈರಸ್ ನಿವಾರಣೆಗೆ ಕಂಪ್ಲಿಯಲ್ಲಿ ತುಳಜಾ ಭವಾನಿಗೆ ವಿಶೇಷ ಪೂಜೆ

Kampli Tulaja Bhavani Special Pooja
Published on

ಕಂಪ್ಲಿ: ಭಾರತ ಕರೊನಾ ವೈರಸ್ ಮುಕ್ತವಾಗಲೆಂದು ಪ್ರಾರ್ಥಿಸಿ ಇಲ್ಲಿನ ಶಿಕಾರಿ ಕಾಲನಿಯ ಹಕ್ಕಿಪಿಕ್ಕಿ ಸಮುದಾಯದಿಂದ ಕುಲದೇವತೆ ತುಳಜಾಭವಾನಿಗೆ ಶನಿವಾರ ವಿಶೇಷ ಪೂಜೆ ಸಲ್ಲಿಸಲಾಯಿತು. ರಾಜ್ಯ ಅಲೆಮಾರಿ, ಅರೆ ಅಲೆಮಾರಿ ವಿಮುಕ್ತ ಬುಡಕಟ್ಟು ಕಲ್ಯಾಣಗಳ ಒಕ್ಕೂಟದ ಉಪಾಧ್ಯಕ್ಷ ಎಚ್.ಪಿ.ಶಿಕಾರಿರಾಮು ಮಾತನಾಡಿ, ಕರೊನಾ ಹಾವಳಿಯಿಂದಾಗಿ ಜನ ಸಂಕಷ್ಟಕ್ಕೀಡಾಗಿದ್ದಾರೆ. ಮನೆಯಲ್ಲಿದ್ದು ದುಡಿಮೆ ವಂಚಿತರಾಗಿದ್ದಾರೆ. ಕರೊನಾ ನಿಯಂತ್ರಣಕ್ಕೆ ಬಂದು ದೇಶದ ಜನ ಸುಖ, ಸಂತೋಷ, ನೆಮ್ಮದಿಯಿಂದ ಜೀವನ ನಡೆಸಬೇಕು ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ಅರ್ಚಕ ಸಣ್ಣ ಹೀರು, ಮುಖಂಡರಾದ ಕರೇಕಲ್ ಮನೋಹರ, ಬಿ.ಶೇಕ್ಷಾವಲಿ, ಬಿ.ನಾಗೇಂದ್ರ, ಈರಣ್ಣ, ಹಕ್ಕಿಪಿಕ್ಕಿ ಅಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಪಿ.ಶ್ರೀಕಾಂತ್ ಹಾಗೂ ಸಮುದಾಯದ ಜನ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net