ಕರೊನಾ ವೈರಸ್ ಮಧ್ಯೆ ಜಿಲ್ಲೆಯಲ್ಲಿ ಡೆಂ ಗೆ ಡಂಗುರ!

masquito-Web
Published on

ಬೆಳಗಾವಿ: ಮಾರಕ ಕರೊನಾ ವೈರಸ್ ಅಬ್ಬರಕ್ಕೆ ದೇಶಾದ್ಯಂತ ಭೀತಿ ಹೆಚ್ಚಿದೆ. ಈ ಮಧ್ಯೆ ಬೆಳಗಾವಿ ಜಿಲ್ಲೆಯಲ್ಲಿ ಡೆಂ ಗೆ ಪ್ರಕರಣಗಳೂ ಬೆಳಕಿಗೆ ಬರುತ್ತಿರುವುದು ಜಿಲ್ಲೆಯ ಜನರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.

ಜಿಲ್ಲೆಯಲ್ಲಿ ಕರೊನಾ ವೈರಸ್ ಮೂರು ಪ್ರಕರಣಗಳು ದೃಢವಾಗಿದ್ದರಿಂದ ಜನರು ಭೀತಿಗೊಳಗಾಗಿದ್ದಾರೆ. ಅಂತಹದ್ದರಲ್ಲಿ ಮಾರಕ ಡೆಂ ಗೆ ಮತ್ತೊಮ್ಮೆ ರೆಕ್ಕೆ ಬಿಚ್ಚಿರುವುದು ವೈದ್ಯಕೀಯ ಸಿಬ್ಬಂದಿಗೂ ತೊಡಕಾಗಿದೆ. ಕರೊನಾ ಸೋಂಕಿತರ ಬಗ್ಗೆ ನಿಗಾ ಇರಿಸಿರುವ ಸಿಬ್ಬಂದಿಗೆ ಈಗ ಜಿಲ್ಲೆಯಲ್ಲಿ 40ಕ್ಕೂ ಹೆಚ್ಚು ಡೆಂೆ ಪ್ರಕರಣಗಳು ತಲೆನೋವು ತಂದಿಡುತ್ತಿವೆ.

ಅಧಿಕಾರಿಗಳಿಗಿಲ್ಲ ಮಾಹಿತಿ: ಜಿಲ್ಲೆಯಲ್ಲಿ ಡೆಂ ಗೆ ಕಬಂಧಬಾಹು ಚಾಚುತ್ತಿದೆ. ಆದರೆ, ಈ ಕುರಿತು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿಗೆ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದಿರುವುದು ಗೊಂದಲಕ್ಕೆ ಕಾರಣವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿಗಳು ಹಾಗೂ ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ನೀಡುವ ಮಾಹಿತಿ ಮಧ್ಯೆ ತಾಳೆಯಾಗುತ್ತಿಲ್ಲ.

ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ

ಬೆಳಗಾವಿಯ ವಂಟಮುರಿಯಲ್ಲಿ ಒಂದು ಡೆಂ ಗೆ ಪ್ರಕರಣ ಪತ್ತೆಯಾಗಿದೆ. ತಿಂಗಳ ಹಿಂದೆ ಬೆಳಗಾವಿ ನಗರದಲ್ಲಿ 3 ಪ್ರಕರಣಗಳು ಬೆಳಕಿಗೆ ಬಂದಿದ್ದವು. ಗೋಕಾಕದಲ್ಲಿ 3, ಚಿಕ್ಕೋಡಿಯಲ್ಲಿ 1 ಪ್ರಕರಣ ಬೆಳಕಿಗೆ ಬಂದಿದೆ. ಡೆಂೆ ಹಾವಳಿ ಹೆಚ್ಚಾಗುತ್ತಿರುವುದರಿಂದ ಜನರು ಆತಂಕಕ್ಕೊಳಗಾಗಿದ್ದಾರೆ. ಆರೋಗ್ಯ ಇಲಾಖೆಯ ಬಹುತೇಕ ಸಿಬ್ಬಂದಿ ಕರೊನಾ ವೈರಸ್ ಜಾಗೃತಿಯಲ್ಲಿ ತೊಡಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಡೆಂೆ ಕಾಲಿಟ್ಟಿರುವುದು ಆರೋಗ್ಯ ಇಲಾಖೆಯ ನಿದ್ದೆಗೆಡಿಸಿದೆ. ಬಾಲಕಿಯೋರ್ವಳು ಮೃತಪಟ್ಟ ಬಳಿಕ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡು ರಕ್ತ ಮಾದರಿಗಳನ್ನು ಸಂಗ್ರಹಿಸುತ್ತಿದೆ.

ಶಿರಗುಪ್ಪಿ ಗ್ರಾಮದಲ್ಲಿ 6 ಡೆಂ ಗೆ ಪ್ರಕರಣ ಪತ್ತೆಯಾಗಿದ್ದು, ಓರ್ವ ಬಾಲಕಿ ಮೃತಪಟ್ಟಿದ್ದಾಳೆ. ಗಡಿಭಾಗದಲ್ಲಿ ಕೆಲವರು ಮಹಾರಾಷ್ಟ್ರದ ಸಾಂಗ್ಲಿ, ಮಿರಜ್ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದರಿಂದ ಅಧಿಕೃತ ವರದಿ ಬರಬೇಕಿದೆ. ಡಾ.ಸೌಮ್ಯ ಚೌಗಲೆ | ವೈದ್ಯಾಧಿಕಾರಿ, ಶಿರಗುಪ್ಪಿ ಪಿಎಚ್‌ಸಿ

| ಜಗದೀಶ ಹೊಂಬಳಿ ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net