ತುಮಕೂರಿಗೆ ವಧು ನೋಡಲು ಹೋದ ಮೂರು ಗ್ರಾಮಸ್ಥರು ಸೋಂಕಿನೊಂದಿಗೆ ವಾಪಸ್‌!

Corona
Published on

ಚಿಕ್ಕಮಗಳೂರು: ಕರೊನಾ ಯಾವಾಗ ಯಾವ ರೀತಿಯಲ್ಲಿ ದೇಹವನ್ನು ಪ್ರವೇಶಿಸುತ್ತದೆಯೋ ಹೇಳಲಾಗದು.

ಚಿಕ್ಕಮಗಳೂರು ಜಿಲ್ಲೆಯಿಂದ ವಧುವನ್ನು ನೋಡಲು ಹೋದ ಎಂಟು ಮಂದಿಗೆ ಸೋಂಕು ತಗುಲಿದೆ. ಮದುವೆಯ ಬ್ರೋಕರ್ ಜತೆ ತುಮಕೂರಿಗೆ ಹೋಗಿದ್ದ ಕುಟುಂಬಕ್ಕೆ ಕರೊನಾ ಒಕ್ಕರಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಗಿರಿಯಾಪುರ, ದಂದೂರು ಸೇರಿದಂತೆ ಮೂರು ಗ್ರಾಮಸ್ಥರು ಸುಮಾರು 20 ಜನ ವಧು ನೋಡಲು ತುಮಕೂರಿಗೆ ಹೊರಟಿದ್ದರು. ಭದ್ರಾವತಿಯ ಬ್ರೋಕರ್ ಇವರನ್ನು ಕರೆದುಕೊಂಡು ಹೋಗಿದ್ದರು. ವಧುವನ್ನು ನೋಡಿ ಹಿಂತಿರುಗುವಾಗ ಬ್ರೋಕರ್‌ನಿಂದಾಗಿ 20 ಮಂದಿಯಲ್ಲಿ 8 ಜನಕ್ಕೆ ಕರೊನಾ ತಗುಲಿದೆ.

ಬೆಂಗಳೂರಿನಿಂದ ವಾಪಸ್‌ ಹೋದವರು ಕರೊನಾ ಸೋಂಕು ತಗುಲಿಸಿಕೊಂಡು ಹೋಗಿದ್ದರಿಂದ ಚಿಕ್ಕಮಗಳೂರಿನಲ್ಲಿ ನಿನ್ನೆ ಒಂದೇ ದಿನ ಜಿಲ್ಲೆಯಲ್ಲಿ 17 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಬೆಂಗಳೂರಿನಲ್ಲಿ ಕೆಲಸಕ್ಕಿದ್ದ ಟೆಕಿ ಒಬ್ಬರ ಕುಟುಂಬದ ಮೂವರಿಗೆ ಸೋಂಕು ತಗುಲಿದೆ. ಸದ್ಯ ಜಿಲ್ಲೆಯಲ್ಲಿ 70 ಪ್ರಕರಣಗಳು ಪತ್ತೆಯಾಗಿದೆ.

ಇದರ ಜತೆಗೆ ಇದೀಗ ಮೂರು ಹಳ್ಳಿಗರು ಕರೊನಾ ಅಂಟಿಸಿಕೊಂಡು ಬಂದಿದ್ದು ಇನ್ನಷ್ಟು ಭೀತಿ ಮೂಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net