

ಶಿರಾ: ಕರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರವೇ ತಹಸೀಲ್ದಾರ್, ಆರೋಗ್ಯ ಇಲಾಖೆ ಸೇರಿ ತಾಲೂಕುಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸಭೆ ನಡೆಸಿದರು.
ಸೋಂಕಿತರ ಪ್ರಾಥಮಿಕ, ದ್ವಿತೀಯ ಹಂತದ ಸಂಪರ್ಕಗಳನ್ನು ಪತ್ತೆ ಹಚ್ಚುವ ಕಾರ‌್ಯಕ್ಕೆ ಬೇಸರಗೊಂಡ ಸಚಿವರು, ರ‌್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಆದ ನಂತರ ಸಂಪರ್ಕಿತರನ್ನು ಗುರುತಿಸುವಲ್ಲಿ ಇಲಾಖೆಗಳು ಎಡವುತ್ತಿದ್ದು, ಸೋಂಕು ಹೆಚ್ಚುವ ಅಪಾಯ ಇದೆ. ಆದ್ದರಿಂದ ಪ್ರಾಥಮಿಕ ಹಂತದಲ್ಲೇ ಎಲ್ಲರ ಪರೀಕ್ಷೆ ನಡೆಸಿ ಎಂದು ಸೂಚಿಸಿದರು.
ಪರ್ಸನಲ್ ಮತ್ತು ಪ್ರೊಫೆಷನಲ್ ರೂಟಿಂಗ್ ವಿಭಾಗ ವಾಡಿಕೊಂಡು, ಅದರಂತೆ ಸೋಂಕಿತರನ್ನು ಪತ್ತೆ ಹಚ್ಚಿ. ಅಗತ್ಯಬಿದ್ದರೆ ಪೊಲೀಸ್ ನೆರವು ಪಡೆದುಕೊಳ್ಳಿ ಎಂದ ಸಚಿವರು, ಆರೋಗ್ಯ ಇಲಾಖೆಗೆ ಸಹಕಾರ ನೀಡಿ ಡಿವೈಎಸ್‌ಪಿ ಅವರಿಗೆ ಸೂಚಿಸಿದರು.
ಫೀವರ್ ಕ್ಲಿನಿಕ್ ಬದಲಿಸಿ: ಸಾರ್ವಜನಿಕ ಆಸ್ಪತ್ರೆ ಪ್ರವೇಶದ ಆರಂಭದಲ್ಲೇ ಫೀವರ್ ಕ್ಲಿನಿಕ್ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದರಿಂದ, ತಕ್ಷಣ ಫೀವರ್ ಕ್ಲಿನಿಕ್ ಬದಲಾಯಿಸಿ, ಮತ್ತೊಂದು ಗೇಟ್ ಬಳಸುವಂತೆ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀನಾಥ್ ಅವರಿಗೆ ಸಚಿವರು ಸೂಚಿಸಿದರು.
ಎಂಸಿಎಚ್ ಆಸ್ಪತ್ರೆಯಲ್ಲಿ 50 ಬೆಡ್ ಬಳಿ ಆಕ್ಸಿಜನ್ ಸರಬರಾಜು ಪೈಪ್‌ಲೈನ್ ಕಾಮಗಾರಿ ಈಗಷ್ಟೇ ಆರಂಭಗೊಂಡಿರುವ ಬಗ್ಗೆ ವಿವರ ಪಡೆದ ಸಚಿವರು, ವೈದ್ಯಾಧಿಕಾರಿ ವಿರುದ್ಧ ಬೇಸರಿಸಿ, ಎರಡು ತಿಂಗಳ ಹಿಂದೆಯೇ ಗುತ್ತಿಗೆದಾರನಿಗೆ ಕಾಮಗಾರಿ ವಾಡುವಂತೆ ಸೂಚಿಸಲಾಗಿತ್ತು. ಆದರೆ ನೀವು ಈಗ ವಿಷಯವನ್ನು ಗಮನಕ್ಕೆ ತರುತ್ತಿದ್ದೀರಿ ಎಂದು ಆಕ್ಷೇಪಿಸಿದರು.
ಟೀಕೆಗಳು, ಆರೋಪಗಳಿಗೆ ಕಿವಿಕೊಡಬೇಡಿ. ನಿಮ್ಮ ಕೆಲಸ ನೀವು ವಾಡಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿ, ಕೆಲಸಕ್ಕೆ ತೊಂದರೆ ವಾಡುವವರ ವಿರುದ್ಧ ತಾವು ಸುಮ್ಮನೆ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ನಗರ ಸಿಪಿಐ ಹನುಮಂತಪ್ಪ, ಗ್ರಾವಾಂತರ ಸಿಪಿಐ ಶಿವಕುವಾರ್ ಮತ್ತಿತರ ತಾಲೂಕುಮಟ್ಟದ ಅಧಿಕಾರಿಗಳು ಇದ್ದರು.