

ಶಿರಾ: ಕಲ್ಪತರುನಾಡು ತುಮಕೂರು ಜಿಲ್ಲೆ ಕರೊನಾ ಮುಕ್ತವಾಗಿದೆ, ಐಸೋಲೇಷನ್‌ನಲ್ಲಿ ಇದ್ದ ಎಲ್ಲರ ಪರೀಕ್ಷಾ ಫಲಿತಾಂಶ ನೆಗೆಟಿವ್ ಬಂದಿದೆ. ಶಿರಾ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ನಲ್ಲಿ ಇರಿಸಲಾಗಿದ್ದವರನ್ನು ಬಿಡುಗಡೆ ವಾಡಿ ಮನೆಗೆ ಕಳುಹಿಸಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ.ರಾಕೇಶ್‌ಕುಮಾರ್ ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ವಾತನಾಡಿದ ಅವರು, ಶಿರಾದಲ್ಲಿ ಕರೊನಾ ಸೋಂಕಿತ ವ್ಯಕ್ತಿ ಮೃತಪಟ್ಟ ಹಿನ್ನೆಲೆಯಲ್ಲಿ ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬದ 22 ಸದಸ್ಯರು ಹಾಗೂ 2ನೇ ಹಂತದ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ನಲ್ಲಿ ಇಟ್ಟು ಚಿಕಿತ್ಸೆ ಕೊಡಲಾಗಿತ್ತು. ಅದರಲ್ಲಿ ಮೃತನ 13 ವರ್ಷದ ಮಗನಿಗೆ ಕರೊನಾ ಪಾಸಿಟಿವ್ ಬಂದಿದ್ದರೂ, ಚಿಕಿತ್ಸೆ ನಂತರ ಆತನು ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ. 3 ಬಾರಿ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, 3 ಬಾರಿಯೂ ಫಲಿತಾಂಶ ನೆಗೆಟಿವ್ ಬಂದ ಕಾರಣ ಎಲ್ಲರನ್ನು ಮನೆಗೆ ಕಳುಹಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಇನ್ನಷ್ಟು ದಿನ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ.
ಇದರಿಂದ ಶಿರಾದಲ್ಲಿ ಸದ್ಯಕ್ಕೆ ಸೋಂಕಿತರ ಸಂಖ್ಯೆ ಸೊನ್ನೆಯಾಗಿದ್ದು, ಜನರು ಆತಂಕಪಡುವ ಅಗತ್ಯವಿಲ್ಲ ಎಂದರು. ಆಸ್ಪತ್ರೆ ಆವರಣದಲ್ಲಿ ಫೀವರ್ ಕ್ಲಿನಿಕ್‌ಗೆ ಭೇಟಿ ವಾಡಿದ ಜಿಲ್ಲಾಧಿಕಾರಿ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸ್ವಚ್ಛತೆ ಮತ್ತಿತರ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಶ್ರೀನಾಥ್‌ಗೆ ವಾರ್ಗದರ್ಶನ ನೀಡಿದರು.
ನಾಹಿದಾ ಜಂಜಂ, ಜಿಲ್ಲಾ ಸಾಂಕ್ರಾಮಿಕ ರೋಗ ನಿಯಂತ್ರಣಾಧಿಕಾರಿ ಡಾ. ಸನತ್ ಕುವಾರ್, ಉಪವಿಭಾಗಾಧಿಕಾರಿ ನಂದಿನಿದೇವಿ, ಇಒ ಮೋಹನ್ ಕುವಾರ್, ಪೌರಾಯುಕ್ತ ಪರಮೇಶ್ವರಪ್ಪ, ವೈದ್ಯಾಧಿಕಾರಿ ಡಾ. ಡಿ.ಎಂ.ಗೌಡ, ಡಾ. ಮಂಜುನಾಥ್, ಕಸಬಾ ಆರ್‌ಐ ಮಂಜುನಾಥ್ ಮತ್ತಿತರರು ಇದ್ದರು.
ರೆಡ್‌ಜೋನ್‌ಗಿಲ್ಲ ಮುಕ್ತಿ: ರೆಡ್‌ಜೋನ್ ಎಂದರೆ ನಗರದ ಸುತ್ತಲಿನ 3 ಕಿಮೀ ವ್ಯಾಪ್ತಿಗೆ ಅನ್ವಯಿಸಲಿದ್ದು, ಶಿರಾದಲ್ಲಿ ಸದ್ಯ ಯಾವುದೇ ಪಾಸಿಟಿವ್ ಪ್ರಕರಣ ಇಲ್ಲದಿದ್ದರೂ ಜೋನ್ ಬದಲಿಸುವ ಪ್ರಸ್ತಾವನೆ ಇಲ್ಲ. ಮೇ 3ರವರೆಗೆ ಲಾಕ್‌ಡೌನ್ ಮುಂದುವರಿಯಲಿದ್ದು, ಅಗತ್ಯ ವಸ್ತುಗಳ ವಾರಾಟ, ಕೃಷಿ ಚಟುವಟಿಗೆಗಳಿಗೆ ಯಾವುದೇ ಅಡ್ಡಿ ಇಲ್ಲ, ಇತರ ವ್ಯವಹಾರಗಳಿಗೆ ನಿರ್ಬಂಧವಿರಲಿದೆ. ಮನೆ ಮನೆ ಸಮೀಕ್ಷೆ ನಡೆಸುತ್ತಿದ್ದು, ಯಾರಿಗಾದರೂ ಸೋಂಕಿನ ಲಕ್ಷಣ ಕಂಡುಬಂದಲ್ಲಿ ನಗರದ ಫೀವರ್ ಕ್ಲಿನಿಕ್‌ಗೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ವೈದ್ಯರ ಶ್ರಮಕ್ಕೆ ಮೆಚ್ಚುಗೆ: ಶಿರಾದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಐಸೋಲೇಷನ್‌ನಲ್ಲಿ ಇದ್ದ ಶಂಕಿತ ಕರೊನಾ ಸೋಂಕಿತರ ಕ್ವಾರಂಟೈನ್ ಅವಧಿ ಮುಗಿದು, ಪರೀಕ್ಷಾ ಫಲಿತಾಂಶ ನೆಗೆಟಿವ್ ಬಂದ ಕಾರಣ ಅವರನ್ನು ಗುರುವಾರ ಬಿಡುಗಡೆ ವಾಡಿದಾಗ ಗುಲಾಬಿ ಹೂ ನೀಡುವ ಮೂಲಕ ತಹಸೀಲ್ದಾರ್ ನಾಹಿದಾ ಜಂಜಂ ಶುಭಕೋರಿ, ಸಣ್ಣ ಮಕ್ಕಳಿಗೆ ಚಾಕೋಲೇಟ್ ನೀಡಿದರು. ಈ ವೇಳೆ ಸ್ಥಳದಲ್ಲಿ ಹಾಜರಿದ್ದ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ, ಸಾರ್ವಜನಕರು ಕರತಾಡನ ಮೂಲಕ ಸೋಂಕು ಮುಕ್ತರಿಗೆ ಶುಭ ಹಾರೈಸಿದರು. ಶಂಕಿತ ಸೋಂಕಿತರನ್ನು ಐಸೋಲೇಷನ್‌ನಲ್ಲಿ ಇರಿಸಿದಾಗಿನಿಂದಲೂ ನಗರದಲ್ಲೇ ಬೀಡು ಬಿಟ್ಟಿದ್ದು, ಸೋಂಕಿತರ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಸನತ್ ಕುವಾರ್, ಆಸ್ಪತ್ರೆ ವೈದ್ಯಾಧಿಕಾರಿ ಡಾ. ಶ್ರೀನಾಥ್ ಮತ್ತು ಸಹೋದ್ಯೋಗಿಗಳು, ದಾದಿಯರು, ಆಸ್ಪತ್ರೆ ಸಿಬ್ಬಂದಿ ಶ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಆತಂಕ ತಂದ ಕ್ವಾರಂಟೈನ್ ಸುದ್ದಿ: ಕರೊನಾ ಸೋಂಕಿನಿಂದ ಶಿರಾ ಮುಕ್ತವಾಗಿದೆ ಎನ್ನುವ ಸಿಹಿ ಸವಾಚಾರದ ನಡುವೆಯೇ, ನೆರೆಯ ರಾಜ್ಯ ಆಂಧ್ರ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕಂದಾಯ ಇಲಾಖೆ ಅಧಿಕಾರಿಯೊಬ್ಬರಿಗೆ ಕರೊನಾ ಪಾಸಿಟಿವ್ ಬಂದ ಕಾರಣ, ಶಿರಾದಲ್ಲಿ ವಾಸಿಸುತ್ತಿದ್ದ ಅವರ ಮಹಿಳಾ ಸಹೋದ್ಯೋಗಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲು ಆಂಧ್ರದ ಪೊಲೀಸರು ಕರೆದುಕೊಂಡು ಹೋಗಿರುವುದು ನಗರದ ಜನರಲ್ಲಿ ಆತಂಕ ಮೂಡಿಸಿದೆ. ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ರಾಕೇಶ್‌ಕುಮಾರ್ ಕೂಡಾ ಪ್ರಕರಣ ದೃಢಪಡಿಸಿದ್ದು, ಮಹಿಳೆಯನ್ನು ಮಡಕಶಿರಾ ತಾಲೂಕು ರೊಳ್ಳೆಯಲ್ಲೇ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ಅಲ್ಲಿನ ಜಿಲ್ಲಾಧಿಕಾರಿ ಸಂಪರ್ಕದಲ್ಲಿ ಇದ್ದು, ಕಾಲಕಾಲಕ್ಕೆ ವಾಹಿತಿ ಪಡೆಯುತ್ತಿದ್ದು, ಅವರ ಕುಟುಂಬದ ಸಂಪರ್ಕಕ್ಕೆ ಬಂದಿದ್ದವರ ಬಗ್ಗೆ ವಿವರ ಪಡೆದಿದ್ದು, ಮುಂಜಾಗ್ರತಾ ಕ್ರಮವಾಗಿ ಎಲ್ಲರನ್ನೂ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.