ಸಿರವಾರ ಮುಖ್ಯರಸ್ತೆ ಪಕ್ಕದಲ್ಲೇ ವಾರದ ಸಂತೆ

200720 Sirawara Weekly Market on Mainroad
ಸಿರವಾರ ಮುಖ್ಯರಸ್ತೆ ಪಕ್ಕದಲ್ಲೇ ಸೋಮವಾರ ವಾರದ ಸಂತೆ ನಡೆಯಿತು.
Published on

ಸಿರವಾರ: ಕರೊನಾ ಕೇಸ್ ಹೆಚ್ಚಳ ಹಿನ್ನೆಲೆಯಲ್ಲಿ ಪ್ರತಿ ಸೋಮವಾರ ನಡೆಯುವ ವಾರದ ಸಂತೆ ರದ್ದು ಮಾಡುವಂತೆ ಪಟ್ಟಣ ಪಂಚಾಯಿತಿ ಆದೇಶಿಸಿತ್ತು. ಆದರೂ ಮುಖ್ಯರಸ್ತೆ ಪಕ್ಕದಲ್ಲೇ ಬೆಳಗ್ಗೆ ಸಂತೆ ನಡೆಯಿತು.

ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡಿದ್ದರಿಂದ ಪಟ್ಟಣದಲ್ಲಿ ಪ್ರತಿ ಸೋಮವಾರ ನಡೆಯುವ ವಾರದ ಸಂತೆ ಬಂದ್ ಮಾಡುವಂತೆ ಪಪಂ ಮುಖ್ಯಾಧಿಕಾರಿ ಶುಕ್ರವಾರ ಆದೇಶ ಹೊರಡಿಸಿದ್ದರು. ಆದರೂ ವ್ಯಾಪಾರಿಗಳು ಆದೇಶ ಪಾಲಿಸದೆ ಸೋಮವಾರ ಸಂತೆ ನಡೆಸಿದರು. ಪಟ್ಟಣ ಸೇರಿ ವಿವಿಧ ಹಳ್ಳಿಗಳಿಂದ ಹೆಚ್ಚಿನ ಜನರು ಸಂತೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net