ಕರೊನಾ ತೊಲಗಲೆಂದು ಮೌಢ್ಯದ ಮೊರೆ ಹೋದ ಹಳ್ಳಿಗರು: ಡಿ.ಕಗಲ್ಲು ಗ್ರಾಮದ ಸುತ್ತ ಅನ್ನ ಚೆಲ್ಲಿದ ಗ್ರಾಮಸ್ಥರು

2505 D Kaggallu Villagers Rice Drop
ಡಿ.ಕಗ್ಗಲ್ಲು ಗ್ರಾಮದಲ್ಲಿ ಟ್ರಾೃಕ್ಟರ್‌ನಲ್ಲಿ ಸಂಗ್ರಹಿಸಿದ್ದ ಅನ್ನವನ್ನು ಚೆಲ್ಲುತ್ತಿರುವ ಗ್ರಾಮಸ್ಥರು.
Published on

ಬಳ್ಳಾರಿ: ಒಂದೆಡೆ ತುತ್ತು ಅನ್ನಕ್ಕಾಗಿ ಜನ ಪರದಾಡುತ್ತಿದ್ದರೆ ಮತ್ತೊಂದೆಡೆ ಮೂಢನಂಬಿಕೆಗೆ ಜೋತುಬಿದ್ದು ನೂರಾರು ಕೆ.ಜಿ. ಅನ್ನವನ್ನು ಗ್ರಾಮೀಣ ಜನತೆ ಮಣ್ಣುಪಾಲು ಮಾಡಿದ್ದಾರೆ. ಕರೊನಾ ತೊಲಗಲಿ ಎಂಬ ಕಾರಣಕ್ಕೆ ತಾಲೂಕಿನ ಡಿ.ಕಗ್ಗಲ್ಲು ಗ್ರಾಮದಲ್ಲಿ ಸೋಮವಾರ ರಾತ್ರಿ ನೂರಾರು ಕೆ.ಜಿ ಅನ್ನ ತಯಾರಿಸಿ, ಅದನ್ನು ಗ್ರಾಮಸ್ಥರು ಗ್ರಾಮದ ಹೊರವಲಯದಲ್ಲಿ ಚೆಲ್ಲಿ ಬರುವ ಮೂಲಕ ಮೌಢ್ಯಾಚಾರಣೆ ಮೆರೆದಿದ್ದಾರೆ. ಹಳ್ಳಿಹಳ್ಳಿಗೂ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕರೊನಾ ದೂರವಾಗಲಿ ಎಂದು ಗ್ರಾಮದ ಪ್ರತಿಯೊಬ್ಬರ ಮನೆಯಲ್ಲಿ ಐದು ಕೆ.ಜಿ ಅನ್ನ ತಯಾರಿಸಿ, ಒಂದೆಡೆ ಸಂಗ್ರಹಿಸಿ, ಅದನ್ನು ಚೆಲ್ಲಲಾಗಿದೆ. ಕೆಲದ ದಿನಗಳ ಹಿಂದೆ ಕುರಗೋಡು ತಾಲೂಕಿನ ಕೆಲ ಗ್ರಾಮಸ್ಥರೂ ಈ ರೀತಿ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net