ಕರೊನಾ ತೊಲಗಿಸಲು ಪ್ರಾರ್ಥಿಸಿ ವಿಶೇಷ ಪೂಜೆ

RVT 11-1
Published on

ರೇವತಗಾಂವ: ದೇಶದಿಂದ ಕರೊನಾ ವೈರಸ್ ತೊಲಗಿಸಬೇಕೆಂದು ಪ್ರಾರ್ಥಿಸಿ ಗ್ರಾಮಸ್ಥರು ಶನಿವಾರ ಸಮೀಪದ ಉಮರಜದ ಹನುಮಾನ ದೇವರ ದೇವಸ್ಥಾನವನ್ನು ಭೀಮಾ ನದಿ ನೀರಿನಿಂದ ತೊಳೆದು ವಿಶೇಷ ಪೂಜೆ ಸಲ್ಲಿಸಿದರು.
ಅರ್ಚಕ ದಾನಪ್ಪ ಸಿದ್ದಪ್ಪ ಪೂಜಾರಿ ಭೀಮಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿ ದೇವರಿಗೆ ರುದ್ರಾಭಿಷೇಕ, ಪುಷ್ಪಾರ್ಚನೆ ಮಾಡಿದರು.
ಗ್ರಾಮಸ್ಥರಿಗೆ ಬಾಳೆ ಹಣ್ಣು ಹಾಗೂ ಅಭಿಷೇಕ ವಿತರಿಸಲಾಯಿತು. ರಾಮ ಪಾಟೀಲ, ಬಸವರಾಜ ಹಿರೇಣ್ಣಿ, ರವಿ ಸ್ತಂಬ, ಸಂತೋಷ ಇರಮಾಣಿ, ಅರವಿಂದ ಪಾಟೀಲ, ಗಣಪತಿ ವಾಲೀಕಾರ, ಮಲ್ಲು ಪೂಜಾರಿ, ದಾನೇಶ ಅಂಬಾರೆ, ಸೊಯಲ್ ವಾಲಿಕಾರ್, ಸತೀಶ್ ಪೂಜಾರಿ, ರಾಮಚಂದ್ರ ನಂದೂರ, ರಾಘವೇಂದ್ರ ವಾಲೀಕಾರ, ಬೀರಪ್ಪ ಅಂಬಿಗೇರ, ಮೀರಾಸಾಬ್ ವಾಲೀಕಾರ, ಅರುಣಕುಮಾರ ಹಿರೇಣ್ಣಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net