

ಶಿವಮೊಗ್ಗ: ಭದ್ರಾವತಿ ಸಂಚಾರ ಠಾಣೆಯ ಪಿಎಸ್‌ಐ ಕೆ.ಬಿ.ರಮೇಶ್ (59) ಅವರನ್ನು ಶುಕ್ರವಾರ ಕರೊನಾ ಬಲಿ ಪಡೆದಿದೆ. ಸಾಗರ ತಾಲೂಕಿನ ಬಾಳೆಗುಂಡಿ ಗ್ರಾಮದ ರಮೇಶ್ ಅವರು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಕರ್ತವ್ಯದಲ್ಲಿದ್ದಾಗ ವಾರದ ಹಿಂದೆ ಸೋಂಕಿಗೆ ಒಳಗಾಗಿದ್ದರು. ಸಾಗರ ಮತ್ತು ಕಾರ್ಗಲ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ನಂತರ ಕಾರ್ಗಲ್ ಹಾಗೂ ಸೊರಬ ಠಾಣೆಯಲ್ಲಿ ಎಎಸ್‌ಐ ಆಗಿ ಸೇವೆ ಸಲ್ಲಿಸಿದ್ದರು. ಮುಂದಿನ ತಿಂಗಳು ನಿವೃತ್ತಿ ಹೊಂದಬೇಕಿದ್ದ ಅವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.