

ಕಂಪ್ಲಿ: ತಾಲೂಕಿನಲ್ಲಿ ಕರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಕರೊನಾ ಬಗ್ಗೆ ವೃಥಾ ಭಯಾತಂಕಪಡುವ ಬದಲಿಗೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ತಾಲೂಕು ಆರೋಗ್ಯ ಮೇಲ್ವಿಚಾರಣಾಧಿಕಾರಿ ಡಾ.ಜಿ.ಅರುಣ್ ತಿಳಿಸಿದ್ದಾರೆ.
ಪರಸ್ಪರ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ನೆಗಡಿ, ಕೆಮ್ಮು, ಜ್ವರದಿಂದ ಸೊಂಕಿತರೊಂದಿಗೆ ದೂರವಿರುವುದು ಸೇರಿ ಕರೊನಾ ಸಂದರ್ಭದಲ್ಲಿ ಅನುಸರಿಸಿದ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು.
ಜನನಿಬಿಡ ಸ್ಥಳ, ಸಭೆ, ಸಮಾರಂಭಗಳಲ್ಲಿ ಅಂತರ ಕಾಪಾಡಿಕೊಳ್ಳುವಲ್ಲಿ ಜಾಗೃತಿ ತೋರಬೇಕು. ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನೆಗಡಿ, ಕೆಮ್ಮು, ಜ್ವರದಿಂದ ಬಳಲುವವರು ಚಿಕಿತ್ಸೆ ಪಡೆದಿದ್ದು ಟೆಸ್ಟಿಂಗ್ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.